ರಾಷ್ಟ್ರಮಟ್ಟದ ಯುವ ಶೂಟರ್‌ ನಮನ್ವೀರ್‌ ಸಿಂಗ್‌ ಬ್ರಾರ್‌ ಆತ್ಮಹತ್ಯೆ

author img

By

Published : Sep 14, 2021, 6:31 PM IST

National level shooter Namanveer Singh Brar allegedly commits suicide at Mohali residence

2015ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದ ಡಬಲ್-ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಮುಡಿಗೇರಿಸಿಕೊಂಡಿದ್ದರು..

ನವದೆಹಲಿ : ರಾಷ್ಟ್ರಮಟ್ಟದ ಶೂಟರ್‌ ನಮನ್ವೀರ್‌ ಸಿಂಗ್‌ ಬ್ರಾರ್ ಮೊಹಾಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ ಬ್ರಾರ್‌ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸೆಕ್ಟರ್‌ 71ನಲ್ಲಿರುವ ತಮ್ಮ ನಿವಾಸದಲ್ಲಿ ಗನ್‌ನಿಂದ ಶೂಟ್‌ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬ್ರಾರ್ ಈ ವರ್ಷದ ಮಾರ್ಚ್‌ನಲ್ಲಿ ನಡೆದ ದೆಹಲಿ ಶೂಟಿಂಗ್ ವಿಶ್ವಕಪ್‌ನ ಕನಿಷ್ಠ ಅರ್ಹತಾ ಸ್ಕೋರ್ (MQS) ವಿಭಾಗದಲ್ಲಿ 4ನೇ ಸ್ಥಾನ ಪಡೆದಿದ್ದರು.

2015ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದ ಡಬಲ್-ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಮುಡಿಗೇರಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.