ETV Bharat / crime

ಐಷಾರಾಮಿ ಹಡಗಿನಲ್ಲಿ ರೇವ್‌ ಪಾರ್ಟಿ: ಬಾಲಿವುಡ್‌ 'ಸೂಪರ್‌ ಸ್ಟಾರ್‌' ಪುತ್ರ ಸೇರಿ ಹಲವರು ಎನ್‌ಸಿಬಿ ವಶಕ್ಕೆ

author img

By

Published : Oct 3, 2021, 6:43 AM IST

Updated : Oct 3, 2021, 9:36 AM IST

ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ಆಯೋಜಿಸಿದ್ದ ರೇವ್‌ ಪಾರ್ಟಿ ಮೇಲೆ ದಾಳಿ ನಡೆಸಿರುವ ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್‌ ಸೂಪರ್‌ಸ್ಟಾರ್ ಪುತ್ರ ಸೇರಿ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಪಾರ್ಟಿಯಲ್ಲಿ ಬಳಸುತ್ತಿದ್ದ ಹಲವು ರೀತಿಯ ನಿಷೇಧಿತ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

Mumbai: NCB detains 10 people in major drug bust
ಮುಂಬೈನ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ; 10 ಮಂದಿ ಬಂಧನ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ನಿನ್ನೆ ದಾಳಿ ನಡೆಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) 10 ಮಂದಿಯನ್ನು ವಶಕ್ಕೆ ಪಡೆದಿದೆ. ಅಧಿಕಾರಿಗಳು ವಶಕ್ಕೆ ಪಡೆದ ಯುವಕ-ಯುವತಿಯರ ಪೈಕಿ ಬಾಲಿವುಡ್‌ ಸೂಪರ್‌ಸ್ಟಾರ್‌ ಪುತ್ರನೂ ಸೇರಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ದಾಳಿಯ ವೇಳೆ ಕೊಕೇನ್‌, ಹಶೀಶ್‌ ಹಾಗೂ ಎಂಡಿಎಂಎ ಸೇರಿ ಹಲವು ರೀತಿಯ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ.

  • #WATCH | Narcotics Control Bureau (NCB) yesterday
    detained at least 10 persons during a raid conducted at a party being held on a cruise in Mumbai

    (Earlier visuals from outside NCB office) pic.twitter.com/c0OctLI1jk

    — ANI (@ANI) October 2, 2021 " class="align-text-top noRightClick twitterSection" data=" ">

ಕಡಲಿನಲ್ಲಿ ಕ್ರೂಸ್‌ ಹಡಗಿನಲ್ಲಿ ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಪಡೆದ ಅಧಿಕಾರಿಗಳು ಪ್ರಯಾಣಿಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

  • #UPDATE | The Narcotics Control Bureau (NCB) has seized the luggage of a few passengers after conducting a raid at a party being held on a cruise in Mumbai.

    At least 10 persons were detained during the raid. pic.twitter.com/ZsC7YiNuQc

    — ANI (@ANI) October 2, 2021 " class="align-text-top noRightClick twitterSection" data=" ">
Last Updated : Oct 3, 2021, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.