ನವದೆಹಲಿ: ದೆಹಲಿ ಪೊಲೀಸ್ ಅಪರಾಧ ವಿಭಾಗವು ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ಅನ್ನು ಭೇದಿಸಿದ್ದು, ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ನ ಸದಸ್ಯನೊಬ್ಬ ಕೊರಿಯರ್ ಮೂಲಕ ಮಾದಕವಸ್ತುಗಳನ್ನು ಪೂರೈಸಲು ದೆಹಲಿಗೆ ಬರುತ್ತಾನೆಂಬ ರಹಸ್ಯ ಮಾಹಿತಿ ಅಪರಾಧ ಶಾಖೆ ಡಿಸಿಪಿ ಮೋನಿಕಾ ಭಾರದ್ವಾಜ್ ಅವರಿಗೆ ಸಿಕ್ಕಿರುತ್ತದೆ. ಈ ಮಾಹಿತಿ ಆಧರಿಸಿ ತಂಡವೊಂದನ್ನು ರಚಿಸಿದ ಭಾರದ್ವಾಜ್, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಕೇಶ್ ಕುಮಾರ್, ದೆಹಲಿಯ ಸೂರಜ್ ದೇವಾಶಿ ಮತ್ತು ಅಂಬಾಲಾದ ರಾಜ್‌ಕುಮಾರ್ ಗುಪ್ತಾ ಬಂಧಿತ ಆರೋಪಿಗಳು. ಇವರಿಂದ 7 ಕೆಜಿ ಅಫೀಮು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: 12 ವರ್ಷದ ಮುಸ್ಲಿಂ ವಿದ್ಯಾರ್ಥಿನಿ ಬಾಯಲ್ಲಿ 500 ಭಗವದ್ಗೀತೆ ಶ್ಲೋಕ!
ಮ್ಯಾನ್ಮಾರ್‌ನಲ್ಲಿ ಮಾದಕವಸ್ತು ಸರಬರಾಜುದಾರರೊಂದಿಗೆ ಸಂಪರ್ಕ ಹೊಂದಿದ್ದ ಬಿಹಾರದ ಮೋತಿಹಾರಿ ಜಿಲ್ಲೆಯ ಕುಖ್ಯಾತ ಡ್ರಗ್ ಪೆಡ್ಲರ್ ಮೂಲಕ ತಾನು ಅಫೀಮು ಪಡೆದು ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.