ETV Bharat / crime

ಬೈಕ್ ಕಳ್ಳತನ ಮಾಡುತ್ತಿದ್ದವನ ಬಂಧನ: 4 ಲಕ್ಷ ರೂ. ಮೌಲ್ಯದ 6 ಬೈಕ್ ವಶ

author img

By

Published : Apr 14, 2021, 10:41 PM IST

ತನಿಖೆ ಕೈಗೊಂಡ ಕೆಂಗೇರಿ ಠಾಣೆ ಇನ್ಸ್​ಪೆಕ್ಟರ್​​ ವಸಂತ್ ಸಿ. ಹಾಗೂ ತಂಡ, ಫೆಬ್ರವರಿ 16ರಂದು ಜೇಬಾ ಮತ್ತು ಪ್ರತಾಪ್ ಎಂಬುವರನ್ನು ಬಂಧಿಸಿದ್ದರು.

Arrested
Arrested

ಬೆಂಗಳೂರು: ನಗರದ ವಿವಿಧೆಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಹೆಜ್ಜಾಲ ಗ್ರಾಮದ ನಿವಾಸಿ ಮನೋಜ್ ಆರ್. (23) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 4 ಲಕ್ಷ ರೂ. ಮೌಲ್ಯದ ಆರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಫೆಬ್ರವರಿ 11ರಂದು ನಾಗದೇವನಹಳ್ಳಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ನಾಲ್ಕು ಜನ ಅಪರಿಚಿತರು ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಕೆಂಗೇರಿ ಠಾಣೆ ಇನ್ಸ್​ಪೆಕ್ಟರ್​​ ವಸಂತ್ ಸಿ. ಹಾಗೂ ತಂಡ, ಫೆಬ್ರವರಿ 16ರಂದು ಜೇಬಾ ಮತ್ತು ಪ್ರತಾಪ್ ಎಂಬುವರನ್ನು ಬಂಧಿಸಿದ್ದರು. ಆರೋಪಿಗಳಿಂದ 2.20 ಲಕ್ಷ ರೂ. ಮೌಲ್ಯದ ಒಂದು ಮೊಬೈಲ್ ಮತ್ತು ಮೂರು ಬೈಕ್ ವಶಪಡಿಸಿಕೊಂಡಿದ್ದರು. ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದರು.

ಫೆಬ್ರವರಿ 23ರಂದು ಆರೋಪಿ ಮೋಹನ್ ರಾಜ್ ಎಂಬುವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮತ್ತೊಬ್ಬ ಆರೋಪಿಯಾದ ಮನೋಜ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ಆರೋಪಿ ಮನೋಜ್‌ನನ್ನು ಬಂಧಿಸಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದರು.

ಆರೋಪಿಯು ಕೆಂಗೇರಿ ಠಾಣೆಯ ಎರಡು ಬೈಕ್ ಕಳವು ಪ್ರಕರಣ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಬಿಡದಿ ಹಾಗೂ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿನ ತಲಾ ಒಂದು ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.