ETV Bharat / city

ಹೆಚ್‌ಎಎಲ್‌ ಹೆಲಿಕಾಪ್ಟರ್ ತಯಾರಿಕಾ ಘಟಕ ವಿಸ್ತರಣೆಗೆ ಪ್ರಸ್ತಾವನೆ: ಜಿ.ಬಸವರಾಜ್

author img

By

Published : Feb 14, 2022, 8:52 AM IST

ಗುಬ್ಬಿಯ ಬಿದರೆಹಳ್ಳ ಕಾವಲ್​ನಲ್ಲಿರುವ ಎಚ್​ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕದ ವಿಸ್ತರಣೆಗೆ 575 ಎಕರೆ ಹೆಚ್ಚುವರಿ ಭೂಮಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತುಮಕೂರು ಸಂಸದ ಜಿ. ಬಸವರಾಜ್ ತಿಳಿಸಿದ್ದಾರೆ.

ತುಮಕೂರು ಸಂಸದ ಜಿ. ಬಸವರಾಜ್
ತುಮಕೂರು ಸಂಸದ ಜಿ. ಬಸವರಾಜ್

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್​ನಲ್ಲಿರುವ ಎಚ್​ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕದ ವಿಸ್ತರಣೆಗೆ 575 ಎಕರೆ ಹೆಚ್ಚುವರಿಯಾಗಿ ಕೇಳಲಾಗಿದೆ ಎಂದು ತುಮಕೂರು ಸಂಸದ ಜಿ. ಬಸವರಾಜ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಬ್ಬಿಯ ಬಿದರೆಹಳ್ಳ ಕಾವಲ್​ನಲ್ಲಿ ಇಂಡೋ ರಷ್ಯನ್ ಸಹಭಾಗಿತ್ವದಲ್ಲಿ ಸೇನಾ ಹೆಲಿಕಾಪ್ಟರ್ ತಯಾರಿ ಘಟಕ ಚಾಲನೆಯಲ್ಲಿದೆ. ಅಗತ್ಯವಿರುವ ಹೆಚ್ಚುವರಿ ಭೂಮಿಗೆ ಪಕ್ಕದಲ್ಲಿರುವ ಕೃಷಿ ಭೂಮಿ ನೀಡಿದ ಕಾರಣ ಪಯಾರ್ಯವಾಗಿ ಚಿಕ್ಕನಾಯಕನಹಳ್ಳಿಯಲ್ಲಿ 1,050 ಎಕರೆ ಭೂಮಿ ಇದ್ದು, ಅದರಲ್ಲಿ ನೀಲಗಿರಿ ಬೆಳೆಯಲಾಗಿದೆ. ಇಲ್ಲಿಗೆ ಹೆಲಿಕಾಪ್ಟರ್ ತಯಾರಿಕಾ ಘಟಕ ವಿಸ್ತರಣೆ ಮಾಡಿದ್ರೆ ದೊಡ್ಡ ಕೈಗಾರಿಕಾ ಉದ್ದಿಮೆ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ ಎಂದರು.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿ. ಬಸವರಾಜ್

2016 ರ ಜನವರಿ 3 ರಂದು ಪ್ರಧಾನಿ ನರೇಂದ್ರ ಮೋದಿ ಬಿದರೆಹಳ್ಳ ಕಾವಲ್​ಗೆ ಭೇಟಿ ನೀಡಿ, 610 ಎಕರೆ ಪ್ರದೇಶದಲ್ಲಿ ಸುಮಾರು 6,300 ಕೋಟಿ ರೂ. ವೆಚ್ಚದ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಚಾಲನೆ ನೀಡಿದ್ದರು. ಇದೀಗ ಇಲ್ಲಿ ತಯಾರಾಗುತ್ತಿರುವ ಕಮೋವ್ ಹೆಲಿಕಾಪ್ಟರ್​ಗಳು 2025ರ ಹೊತ್ತಿಗೆ ಭಾರತೀಯ ವಾಯುಸೇನೆ ಸೇರಿಕೊಳ್ಳಲಿವೆ ಎಂಬ ಮಾಹಿತಿ ಸಾಕಷ್ಟು ಚರ್ಚೆಗೆ ಬಂದಿದೆ.

ಬಿದರೆಹಳ್ಳ ಕಾವಲ್​ನಲ್ಲಿರುವ ಘಟಕದಲ್ಲಿ ಭಾರತ ಮತ್ತು ರಷ್ಯಾ ಸಹಭಾಗಿತ್ವದಲ್ಲಿ ಈ ಹೆಲಿಕಾಪ್ಟರ್​ಗಳು ತಯಾರಾಗುತ್ತಿವೆ. ಈಗಾಗಲೇ ಲಖನೌದಲ್ಲಿ ಮಾಹಿತಿ ನೀಡಿರೋ ಇಂಡೋ-ರಷ್ಯನ್ ಹೆಲಿಕಾಪ್ಟರ್ ಲಿಮಿಟೆಡ್ ಸಿಇಒ ಎನ್.ಎಂ. ಶ್ರೀನಾಥ್ ಪ್ರಕಾರ, 200 ಕಮೋ ಕೆ226ಟಿ ಹೆಲಿಕಾಪ್ಟರ್​ಗಳನ್ನು ಬಿದರೆಹಳ್ಳ ಕಾವಲ್​ನಲ್ಲಿ ತಯಾರಿಸಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.