ETV Bharat / city

ಹಿಜಾಬ್​ - ಕೇಸರಿ ಗಲಾಟೆ: ಶಿಕಾರಿಪುರದಲ್ಲಿ ಬಸ್​ಗೆ ಕಲ್ಲು ತೂರಾಟ.. ಶಿವಮೊಗ್ಗದಲ್ಲಿ 144 ಸೆಕ್ಷನ್​ ಜಾರಿ

author img

By

Published : Feb 8, 2022, 2:15 PM IST

Updated : Feb 8, 2022, 4:00 PM IST

ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಕೂಡ ಹಿಜಾಬ್​- ಕೇಸರಿ ಶಾಲು ವಿವಾದ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿದ್ದು, ಶಿವಮೊಗ್ಗ ಜಿಲ್ಲಾಡಳಿತ 144 ಸೆಕ್ಷನ್​ ಜಾರಿ ಮಾಡಿ ಆದೇಶ ಹೊರಡಿಸಿದೆ.

section 144 imposed in Shimoga
ಶಿಕಾರಿಪುರದಲ್ಲಿ ಬಸ್​ಗೆ ಕಲ್ಲು ತೂರಾಟ

ಶಿವಮೊಗ್ಗ: ಶಿಕಾರಿಪುರದಲ್ಲಿ ಚಲಿಸುತ್ತಿದ್ದ ಬಸ್​​​​ನ ಮೇಲೆ ಉದ್ರಿಕ್ತ ಗುಂಪೂಂದು ಕಲ್ಲು ತೂರಾಟ ನಡೆಸಿದೆ. ಇದರಿಂದ ಬಸ್ಸಿನ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ರಸ್ತೆಯ ಪದವಿ ಪೂರ್ವ ಕಾಲೇಜಿನ ಮುಂಭಾಗ ಘಟನೆ ನಡೆದಿದೆ. ಹಿಜಾಬ್ ​- ಕೇಸರಿ ಶಾಲು ವಿವಾದ ಸಂಬಂಧ ಕಾಲೇಜಿನ ಬಳಿ ಪ್ರತಿಭಟನೆ ನಡೆಯುವಾಗ ಉದ್ರಿಕ್ತ ಅನ್ಯ ಕೋಮಿನ ಯುವಕರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪ್ರಯಾಣಿಕರು ಹೆದರಿ ಬಸ್ ಇಳಿದು ಓಡಿ ಹೋಗಿದ್ದಾರೆ. ಬಸ್​​​ನ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ‌ ನೀಡಿ ಗುಂಪು ಚದುರಿಸಿದ್ದು, ಬಿಗುವಿನ ವಾತಾರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ!

144 ಸೆಕ್ಷನ್​ ಜಾರಿ: ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಕೂಡ ಹಿಜಾಬ್​ - ಕೇಸರಿ ಶಾಲು ವಿವಾದ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಶಿವಮೊಗ್ಗದಲ್ಲಿ 144 ಸೆಕ್ಷನ್​ ಜಾರಿ

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆ. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತಮಗೆ ನ್ಯಾಯಬೇಕು ಎಂದು ಹೇಳಿ ಪ್ರತಿಭಟನೆಗೆ ಮುಂದಾಗಿ ಬಿ.ಹೆಚ್.ರಸ್ತೆ ಕಡೆ ಬರುವಾಗ ಕೆಲ ಯುವಕರು ಘೋಷಣೆ ಹಾಕುತ್ತಾ ಸಾಗುವಾಗ ಪೊಲೀಸರು ತಡೆಯಲು ಯತ್ನಿಸಿದರೂ ಸಹ ಕೇಳದೆ ರಸ್ತೆಗೆ ಹೋಗಲು ಮುಂದಾದದ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅನ್ಯ ಕೋಮಿನ ಯುವಕರು ಬಸವೇಶ್ವರ ವೃತ್ತದ ಬಳಿ ಬಂದು ಪ್ರತಿಭಟನೆ ನಡೆಸಿದರು. ಇವರನ್ನು ಪೊಲೀಸರು ಬ್ಯಾರಿಕೇಡ್​​ ಹಾಕಿ ತಡೆದರು.

ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ 144 ಸೆಕ್ಷನ್​ ಜಾರಿ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಶಾಲಾ - ಕಾಲೇಜುಗಳಿಂದ ಮನೆಗೆ ವಾಪಾಸಾಗುತ್ತಿದ್ದಾರೆ. ಪೊಲೀಸರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ತಮ್ಮ ವಾಹನದಲ್ಲಿ ಅನೌನ್ಸ್ ಮಾಡುತ್ತಿದ್ದಾರೆ.

ಎಸ್​ಪಿ ಬೈಟ್:

ನಗರದ ವಿವಿಧ ಕಾಲೇಜುಗಳಲ್ಲಿ ಕೇಸರಿ, ಹಿಜಾಬ್ ವಿವಾದ ಭುಗಿಲೆದ್ದಿದೆ. ಕಲ್ಲು ತೂರಾಟ, ಲಾಟಿ ಚಾರ್ಜ್ ಆಗಿದೆ, ಹಾಗಾಗಿ ಪರಿಸ್ಥಿತಿ ತಿಳಿಗೊಳಿಸಲು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದರು.

ಶಿವಮೊಗ್ಗದಲ್ಲಿ 144 ಸೆಕ್ಷನ್​ ಜಾರಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಲಾಟೆ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದೆ. ನಗರದಾದ್ಯಂತ ಅಂಗಡಿ, ಮುಗ್ಗಟ್ಟು ಬಂದ್ ಮಾಡಲಾಗಿದ್ದು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಾಲ್ಕು ಜನಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಸೇರಬಾರದು. ಎಲ್ಲರೂ ಸಹಕರಿಸಬೇಕು ಎಂದು ಎಸ್​ಪಿ ತಿಳಿಸಿದರು.

Last Updated : Feb 8, 2022, 4:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.