ETV Bharat / city

ಶಿವಮೊಗ್ಗ ಚೂರಿ ಇರಿತ ಪ್ರಕರಣ.. ಪೊಲೀಸರ ಪಥಸಂಚಲನದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಭಾಗಿ

author img

By

Published : Aug 16, 2022, 7:25 PM IST

Updated : Aug 16, 2022, 7:42 PM IST

ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಕೆಎಸ್​ಆರ್​ಪಿ ಪೊಲೀಸರು ಶಿವಮೊಗ್ಗ ನಗರದಲ್ಲಿ ಇಂದು ಪಥಸಂಚಲನ ಮೂಡಿಸಿದರು.

RAF and police passage in Shimoga
ಶಿವಮೊಗ್ಗದಲ್ಲಿ ಆರ್​ಎಎಫ್, ಪೊಲೀಸರ ಪಥಸಂಚಲನ

ಶಿವಮೊಗ್ಗ: ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳವಾರ ಶಿವಮೊಗ್ಗ ಪೊಲೀಸರಿಂದ ಪಥಸಂಚಲನ ನಡೆಸಲಾಯಿತು. ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಪಥಸಂಚಲನ ಸೂಕ್ಷ್ಮ ಪ್ರದೇಶಗಳಾದ ಟಿಪ್ಪುನಗರ, ಅಣ್ಣಾ ನಗರ, ತುಂಗಾ ನಗರ ಭಾಗದಲ್ಲಿ ಸಾಗಿತು.

ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಕೆಎಸ್​ಆರ್​ಪಿ ಪೊಲೀಸರು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಪಥಸಂಚಲನ ನಡೆಸಿದರು. ಇದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಎಸ್ಪಿ ಲಕ್ಷ್ಮಿ ಪ್ರಸಾದ್ ಸೇರಿದಂತೆ ತುಂಗಾನಗರ ಪಿಐ ಭಾಗವಹಿಸಿದ್ದರು.

ಶಿವಮೊಗ್ಗದಲ್ಲಿ ಆರ್​ಎಎಫ್, ಪೊಲೀಸರ ಪಥಸಂಚಲನ

ಇದನ್ನೂ ಓದಿ: ಸಿದ್ದರಾಮಯ್ಯ ವೋಟಿಗಾಗಿ ಸಾವರ್ಕರ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸೋಮವಾರ ಇರಿಸಲಾಗಿದ್ದ ವೀರ ಸಾವರ್ಕರ್ ಫ್ಲೆಕ್ಸ್ ತೆರವು ಮಾಡಿದ ಬೆನ್ನಲ್ಲೇ ಗಲಾಟೆ ನಡೆದಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ನಡುವೆಯೂ ಓರ್ವ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಈ ಎಲ್ಲಾ ಕಾರಣದಿಂದ ನಗರದಲ್ಲಿ ಇಂದು ಪೊಲೀಸರು ಪಥಸಂಚಲನ ನಡೆಸಿದ್ದಾರೆ.

Last Updated : Aug 16, 2022, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.