ETV Bharat / city

ನಾಳೆ ಶಿವಮೊಗ್ಗದಲ್ಲಿ ಪೇಜಾವರ ಶ್ರೀಗಳ ಸಂಸ್ಮರಣಾ ಕಾರ್ಯಕ್ರಮ ..

author img

By

Published : Jan 3, 2020, 11:44 AM IST

ಪೇಜಾವರ ಶ್ರೀಗಳ ಸಂಸ್ಮರಣಾ ಕಾರ್ಯಕ್ರಮ ಶನಿವಾರ ನಗರದ ಸಾಗರ ರಸ್ತೆಯ ದ್ವಾರಕ ಕನ್ವೆಷನ್​​​ ಹಾಲ್​​ನಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

Pajawara Shrila Memorial Program
ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನ ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.

ಸಚಿವ ಕೆ ಎಸ್‌ ಈಶ್ವರಪ್ಪ..

ಶ್ರೀಗಳು ಶಿವಮೊಗ್ಗ ಶ್ರೀಗಂಧ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದರು. ಸಂಸ್ಥೆ ಪ್ರಾರಂಭವಾದ 25 ವರ್ಷಗಳಿಂದಲೂ ಅವರೇ ಗೌರವಾಧ್ಯಕ್ಷರಾಗಿದ್ದರು. ನಗರದ ಸಾಗರ ರಸ್ತೆಯಲ್ಲಿರುವ ದ್ವಾರಕ ಕನ್ವೆಷನ್​​​ ಹಾಲ್​​ನಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ ಎಂದರು.

Intro:ವಿಶ್ವಸಂತ, ರಾಷ್ಟ್ರೀಯ ವಿಚಾರಧಾರೆಗಳನ್ನು ನೇರವಾಗಿ ಹೇಳುತ್ತಿದ್ದ ನಿಷ್ಟೂರವಾದಿ ಉಡುಪಿಯ ಪೇಜಾವರ ಶ್ರೀಗಳು ಶಿವಮೊಗ್ಗ ಶ್ರೀಗಂಧ ಸಂಸ್ಥೆಯ ಗೌರವಾಧ್ಯಕ್ಷರು. ಇವರ ಸಂಸ್ಮರಣಾ ಕಾರ್ಯಕ್ರಮವನ್ನು ಶ್ರೀಗಂಧ ಸಂಸ್ಥೆ ಶಿವಮೊಗ್ಗದಲ್ಲಿ ನಾಡಿದ್ದು ಶನಿವಾರ ಆಯೋಜನೆ ಮಾಡಿದೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು, ಗ್ರಾಮೀಣಾಭಿವೃದ್ದಿ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಶ್ರೀಗಂಧ ಸಂಸ್ಥೆ ಪ್ರಾರಂಭವಾಗಿ 25 ವರ್ಷವಾಗಿದೆ. 25 ವರ್ಷಗಳಿಂದಲೂ‌ ಸಹ ವಿಶ್ವೇಶ್ವರ ತೀರ್ಥರು ನಮ್ಮ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದರು. ಇವರನ್ನು ಸ್ಮರಿಸಿ ಕೊಳ್ಳುವ ಸಲುವಾಗಿ ನಾಡಿದ್ದು ಶನಿವಾರ ಸಂಸ್ಮರಣ ಕಾರ್ಯಕ್ರಮವನ್ನು


Body:ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಇರುವ ದ್ವಾರಕ ಕನ್ವೆಕ್ಷನ್ ಹಾಲ್ ನಲ್ಲಿ ಸಂಜೆ 6 ಗಂಟೆಗೆ ನಡೆಸಲಾಗುತ್ತದೆ. ಅಂದು‌ ಶ್ರೀಗಳ ನುಡಿ ನಮನವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಮಾಡಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹರಾದ ಟಿ. ಪಟ್ಟಾಭಿರಾಮ ರವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ನಾನು ವಹಿಸುತ್ತೆನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.


Conclusion:ಕಾರ್ಯಕ್ರಮಕ್ಕೆ ವಿಶ್ವೇಶ್ವರ ತೀರ್ಥರ ಅಭಿಮಾನಿಗಳು, ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಿ ಸಂಸ್ಮರಣ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ವಿನಂತಿಸಿ ಕೊಂಡಿದ್ದಾರೆ. ಈ ವೇಳೆ ಸಂಸ್ಥೆಯ ಮಧುಸೂಧನ್‌ ಸೇರಿ ಇತರರು ಹಾಜರಿದ್ದರು.

ಬೈಟ್: ಕೆ.ಎಸ್.ಈಶ್ವರಪ್ಪ.ಸಚಿವರು. ಗ್ರಾಮೀಣಾಭಿವೃದ್ದಿ ಖಾತೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.