ETV Bharat / city

Bitcoin ವಿಚಾರದಲ್ಲಿ ಕಾಂಗ್ರೆಸ್ ಖಾಲಿ ಡಬ್ಬದಂತೆ ಸದ್ದು​​ ಮಾಡ್ತಿದೆ.. ಈಶ್ವರಪ್ಪ ವ್ಯಂಗ್ಯ

author img

By

Published : Nov 13, 2021, 1:42 PM IST

ಬಿಟ್ ಕಾಯಿನ್ (Bitcoin scam)ವಿಚಾರದಲ್ಲಿ ಕಾಂಗ್ರೆಸ್​ನವರು(Congress leaders)ಖಾಲಿ ಡಬ್ಬದ ರೀತಿ ಬರೀ ಸದ್ದು ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ(Reveal the document)ಎಂದು ಸಚಿವ ಕೆ.ಎಸ್.ಈಶ್ವರಪ್ಪ(Minister K.s.Eshwarappa) ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ks eshwarappa reaction
ಸಚಿವ ಕೆ.ಎಸ್​. ಈಶ್ವರಪ್ಪ

ಶಿವಮೊಗ್ಗ: ಬಿಟ್ ಕಾಯಿನ್ (Bitcoin scam) ವಿಚಾರದಲ್ಲಿ ಕಾಂಗ್ರೆಸ್​ನವರು(Congress leaders)ಖಾಲಿ ಡಬ್ಬದ ರೀತಿ ಬರೀ ಸದ್ದು ಮಾಡುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿದೆ(Reveal the document)ಎಂದು ಸಚಿವ ಕೆ.ಎಸ್.ಈಶ್ವರಪ್ಪ(K.s.Eshwarappa) ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಮಾಡಲು ಉದ್ಯೋಗವಿಲ್ಲ. ಇದರಿಂದ ಬಿಟ್ ಕಾಯಿನ್ ವಿಚಾರವನ್ನು ತೆಗೆದುಕೊಂಡಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿಯ ಯಾವುದಾದರೂ ಒಬ್ಬ ನಾಯಕ, ಮಂತ್ರಿ, ಸಿಎಂ, ಪಕ್ಷದ ಪದಾಧಿಕಾರಿಗಳು ಇದ್ದರೆ ಈ ಬಗ್ಗೆ ಕೂಡಲೇ ದಾಖಲೆ ಬಿಡುಗಡೆ ಮಾಡಲಿ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್​ ಖರ್ಗೆ ಬರೀ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ. ಯಾವುದಾರೂ ಒಂದು ದಾಖಲೆ ಇದ್ದರೆ ತೋರಿಸಲಿ. ಅದನ್ನು ಬಿಟ್ಟು ಖಾಲಿ ಡಬ್ಬದಂತೆ ಮಾತನಾಡುವುದನ್ನು ಬಿಡಬೇಕು ಎಂದು ಟೀಕಿಸಿದರು.

ಇನ್ನೆರಡು ದಿನದಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ

ವಿಧಾನ ಪರಿಷತ್​(ಎಂಎಲ್​ಸಿ) ಚುನಾವಣೆ ಘೋಷಣೆಯಾಗಿದೆ. ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್ ನೇತೃತ್ವದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ರಾಜ್ಯಾಧ್ಯಕ್ಷರು ಸಿಎಂ ಜೊತೆ ಚರ್ಚಿಸಿ ಅಂತಿಮಗೊಳಿಸಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಕಾಂತೇಶನಿಗೆ ಯಾವುದೇ ಸ್ಥಾನ ಬೇಡ

ನಾನು ಮಂತ್ರಿಯಾಗಿರುವುದರಿಂದ ನನ್ನ ಪುತ್ರ ಕಾಂತೇಶನಿಗೆ ಎಂಎಲ್ಎ ಹಾಗೂ ಎಂಎಲ್​ಸಿ ಸ್ಥಾನ ಬೇಡ ಎಂದು ತೀರ್ಮಾನಿಸಿದ್ದೇನೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.