ETV Bharat / city

ಶಿವಮೊಗ್ಗ: ಕದಂಬ ರಾಜವಂಶಸ್ಥ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆ

author img

By

Published : Feb 4, 2022, 1:49 PM IST

ಸೊರಬ ತಾಲೂಕು ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಬಳಿ ಕದಂಬ ರಾಜವಂಶಸ್ಥನಾದ ರಾಜ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆಯಾಗಿದೆ.

inscription of kadamba dynasty found at shivamogga
ಕದಂಬ ರಾಜವಂಶಸ್ಥ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆ

ಶಿವಮೊಗ್ಗ: ಕರ್ನಾಟಕವನ್ನಾಳಿದ ಪ್ರಥಮ ಕನ್ನಡ ರಾಜವಂಶಸ್ಥ ರವಿವರ್ಮನ ಕಾಲದ ಅಪರೂಪದ ಶಾಸನ ಸೊರಬದಲ್ಲಿ ಪತ್ತೆಯಾಗಿದೆ. ಸೊರಬ ತಾಲೂಕು ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಬಳಿ ಕದಂಬ ರಾಜವಂಶಸ್ಥನಾದ ರಾಜ ರವಿವರ್ಮನ ಕಾಲದ ಕಲ್ಲಿನ ಶಾಸನ ಪತ್ತೆಯಾಗಿದೆ.

inscription of kadamba dynasty found at shivamogga
ರಾಜವಂಶಸ್ಥ ರವಿವರ್ಮ ಕಾಲದ ಕಲ್ಲಿನ ಶಾಸನ ಪತ್ತೆ

ಈ ಶಾಸನವನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಆರ್‌. ಶೇಜೇಶ್ವರ ಅವರು ಪತ್ತೆ ಮಾಡಿದ್ದಾರೆ. ಕಲ್ಲಿನ ಶಾಸನವು 143 ಸೆ.ಮೀ ಉದ್ದ ಹಾಗೂ 49 ಸೆ.ಮೀ ಅಗಲವಿದೆ. ಇದು ಬ್ರಾಹ್ಮಿ ಲಿಪಿ ಹಾಗೂ ಸಂಸ್ಕೃತ ಭಾಷೆಯ ಏಳು ಸಾಲಿನಿಂದ ಕೊಡಿದೆ. ಶಾಸನವು ಅಲ್ಲಲ್ಲಿ ಸ್ವಲ್ಪ ಒಡೆದು ಹೋಗಿದೆ.

ಇದನ್ನೂ ಓದಿ: ಬೆಳಗಾವಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ PSI ಖಡಕ್‌ ವಾರ್ನಿಂಗ್

ಕದಂಬ ರವಿವರ್ಮನಿಗೆ ಸಂಬಂಧಿಸಿದಂತೆ ಇದುವರೆಗೂ 10 ಶಾಸನಗಳು ಮಾತ್ರ ದೂರೆತಿದೆ. ಈಗ ದೂರೆತಿರುವ ಶಾಸನವು ಸೇರಿ 11 ಶಾಸನಗಳಾಗಿವೆ‌. ರವಿವರ್ಮ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ 485 ರಿಂದ ಕ್ರಿ.ಶ 519 ರ ವರೆಗೂ 34 ವರ್ಷಗಳ ಕಾಲ ಆಡಳಿತ ನಡೆಸಿದ್ದಾನೆ.

ಶಾಸನದ ಸಾರಾಂಶ ಹೀಗಿದೆ: ಈ ಶಾಸನವು ಹಾರಿತಿಯ ಪುತ್ರರಾದ ಮಾನವ್ಯಸ ಅಧಿಪತಿಯಾದ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟು ಮುಚ್ಚುಂಡಿಯ ಗ್ರಾಮದಲ್ಲಿ ಆರನೇ ಒಂದು ಭಾಗವನ್ನು ದಾನವನ್ನಾಗಿ ನೀಡಿದ್ದಾರೆ. ದಾನ ನೀಡಿದ ಗ್ರಾಮವು ಶಿಕಾರಿಪುರ. ಕ್ರಿ.ಶ 5-6 ನೇ ಶತಮಾನದ್ದಾಗಿದೆ. ಈ ಶಾಸನದ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹ ದೊರೆತಿದೆ. ಇದರ ಅಕ್ಕಪಕ್ಕದಲ್ಲಿಯೇ ಇತರ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಕಂಡು ಬಂದಿದೆ. ಇದು ಒಂದು ದಾನ ಶಾಸನವಾಗಿರುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.