ETV Bharat / city

ಶಿಸ್ತಿನ ಪಕ್ಷ ರಮೇಶ್ ಜಾರಕಿಹೊಳಿ ಮೇಲೆ ಕ್ರಮ ತೆಗದುಕೊಳ್ಳಲಿ : ಬಿಜೆಪಿಗೆ ಡಿಕೆಶಿ ಸವಾಲು

author img

By

Published : Dec 4, 2021, 1:22 PM IST

ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷ ಅಂತ ಹೇಳುವ ನಾಯಕರು, ಪಕ್ಷಕ್ಕೆ ವಿರೋಧವಾಗಿ ತಮ್ಮ ಸಹೋದರನನ್ನು ವಿಧಾನ ಪರಿಷತ್​ ಚುನಾವಣೆಗೆ ನಿಲ್ಲಿಸಿರುವ ರಮೇಶ್​ ಜಾರಕಿಹೊಳಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಿ ನೋಡೋಣ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸವಾಲು ಹಾಕಿದರು. ಅಲ್ಲದೆ, ಈಶ್ವರಪ್ಪ ಸಿಎಂ ಬದಲಾವಣೆ ಹೇಳಿಕೆಯನ್ನು ಸಮರ್ಥಿಸಿದರು. ಮತ್ತು ಆರಗ ಜ್ಞಾನೇಂದ್ರ ಪೊಲೀಸರ ಮೇಲಿನ ಹೇಳಿಕೆಗೆ ವ್ಯಂಗ್ಯವಾಡಿದರು..

dk-shivakumar
ಡಿಕೆ ಶಿವಕುಮಾರ್​

ಶಿವಮೊಗ್ಗ : ಬಿಜೆಪಿಗರು ತಮ್ಮದು ಶಿಸ್ತಿನ ಪಕ್ಷ ಅಂತಾರೆ. ಹಾಗಿದ್ರೆ, ಬೆಳಗಾವಿಯಲ್ಲಿ ರಮೇಶ್​​ ಜಾರಕಿಹೊಳಿ, ಅವರ ತಮ್ಮನಾದ ಲಖನ್ ಜಾರಕಿಹೊಳಿಯನ್ನು ಯಾಕೆ ಚುನಾವಣೆಗೆ ನಿಲ್ಲಿಸಿದ್ರು. ಅವರ ಮೇಲೆ ಬಿಜೆಪಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಮಲಪಾಳಯಕ್ಕೆ ಸವಾಲ್​ ಎಸೆದರು.

ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸವಾಲು ಹಾಕಿರುವುದು..

ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕೊರೊನಾ ಸಂದರ್ಭದಲ್ಲಿ 10 ಸಾವಿರ ಬೆಡ್ ಖರೀದಿ ಅವ್ಯವಹಾರ ನಡೆದಿದೆ ಎಂದರು. ಅಲ್ಲದೆ, ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈಶ್ವರಪ್ಪ ಹೇಳಿದಂತೆ ಆಗುತ್ತೆ : ಈಶ್ವರಪ್ಪ ಸಿಎಂ ಬದಲಾವಣೆ ಹೇಳಿಕೆ ನೀಡಿದ್ದಾರೆ. ಅವರು ಡಿಸಿಎಂ ಆಗಿದ್ದವರು, ಅವರು ಹೇಳಿದಂತೆ ನಡೆಯಬಹುದು. ಯಾಕಂದ್ರೆ, ಈ ಹಿಂದೆ ಅವರು, ಸಿಎಂ ಬದಲಾವಣೆ ಅಂದಿದ್ರು. ನಾವು ಆಗೊಲ್ಲ ಅಂತಾ ಅಂದುಕೊಂಡಿದ್ದೆವು. ಆದ್ರೆ, ಅದು ಆಗೋಯ್ತು. ಯಡಿಯೂರಪ್ಪ ಕಣ್ಣಲ್ಲಿ ನೀರು ಹಾಕಿದ್ದರು.‌ ಈಶ್ವರಪ್ಪ ಹೇಳಿದ್ದು ಸತ್ಯವಾಗಬಹುದು ಎಂದರು.

Araga jnanendra allegations on police : ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು. ಹಾಗೇ ಮುಂದುವರೆದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರ ಮೇಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪಾಪ ಗೃಹ ಸಚಿವರು ಇರುವುದನ್ನು ಹೇಳ್ತಾ ಇದ್ದಾರೆ.

ಆಯುಧ ಪೂಜೆ ದಿನ ಉಡುಪಿ, ವಿಜಯಪುರದಲ್ಲಿ ಪೊಲೀಸರಿಗೆ ಹೊಸ ಬಟ್ಟೆ ಕೊಡಿಸಿದ್ದಾರೆ. ಎಂಜಲು ಕಾಸು ಎಂಬ ಪದ ಬಳಸಿದ್ದಾರೆ. ನಾಯಿಯಾದರೂ ನಿಯತ್ತಿನ ಪ್ರಾಣಿಯಾಗಿದೆ. ಆರಗ ಜ್ಞಾನೇಂದ್ರ ತರಹದವರು ಇರಬೇಕು. ಆ ಇಲಾಖೆಯಲ್ಲಿ ಏನಾಗ್ತಿದೆ ಎಂಬುದು ಅವರೇ ಹೇಳಬೇಕು. ಆದರೆ, ಪದ ಬಳಕೆ ತಪ್ಪು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.