ETV Bharat / city

ಹರ್ಷ ಹತ್ಯೆಗೆ ಪ್ರತೀಕಾರವಾಗಿ ಅನ್ಯಕೋಮಿನ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿದ್ದ 13 ಮಂದಿ ಅಂದರ್!

author img

By

Published : Apr 16, 2022, 4:42 PM IST

ಹರ್ಷ ಕೊಲೆಯ ಪ್ರತೀಕಾರಕ್ಕೆ ಅನ್ಯ ಧರ್ಮದ ಲೀಡರ್ ಅಲ್ಲಾವುದ್ದಿನ್ ಕೊಲೆ ನಡೆಸಿ ಮತ್ತೆ ಶಿವಮೊಗ್ಗದಲ್ಲಿ ಕೋಮು ಗಲಭೆ ಉಂಟು ಮಾಡುವುದು ಹಾಗೂ ಎಚ್ಚರಿಕೆಯನ್ನು ನೀಡುವುದು‌ ಇವರ ಉದ್ದೇಶವಾಗಿತ್ತು. ಎಸ್ಪಿ ಲಕ್ಷ್ಮಿಪ್ರಸಾದ್ ಅವರ ಖಡಕ್ ನಿರ್ಧಾರದಿಂದ ಫೋನ್ ಆಲಿಕೆಯಿಂದ ಎಲ್ಲರನ್ನೂ ಬಂಧಿಸಲಾಗಿದೆ..

Arrest of 13 accused who sketched for murder of Muslim leader in Shivamogga
ಹರ್ಷ ಹತ್ಯೆಗೆ ಪ್ರತೀಕಾರವಾಗಿ ಅನ್ಯಕೋಮಿನ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿದ್ದ 13 ಮಂದಿ ಅಂದರ್

ಶಿವಮೊಗ್ಗ: ಫೆಬ್ರವರಿ 20ರಂದು ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಪ್ರತೀಕಾರವಾಗಿ ಅನ್ಯ ಧರ್ಮದ ಮುಖಂಡನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ 13 ಜನರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಹರ್ಷ ಕೊಲೆಯಾದ ನಂತರ ಶಿವಮೊಗ್ಗದಲ್ಲಿ ಗಲಾಟೆ ನಡೆದಿತ್ತು. ಹರ್ಷನ ಮೃತದೇಹ ಮೆರವಣಿಗೆಯಲ್ಲಿ ಕಲ್ಲು ತೂರಾಟ ಉಂಟಾಗಿತ್ತು. ಈ ಗಲಾಟೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಿದಾಗ ಪೊಲೀಸರಿಗೆ ಕೆಲ ಸತ್ಯ ತಿಳಿದು ಬಂದಿದೆ.

ಕೊಲೆ ಸ್ಕೇಚ್ ಬಗ್ಗೆ ಬಾಯ್ಬಿಟ್ಟ ರೌಡಿಶೀಟರ್ : ಪತ್ರಕರ್ತರ ಮೇಲೆ ಹಲ್ಲೆ ಕುರಿತು ತನಿಖೆ ಪ್ರಾರಂಭಿಸಿದ ಪೊಲೀಸರು ಮೊದಲು ವಿಶ್ವಾಸ್ ಅಲಿಯಾಸ್ ಜೇಟ್ಲಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನ್ಯ ಕೋಮಿನ ಮುಖಂಡ ಅಲ್ಲಾವುದ್ದೀನ್ ಎಂಬಾತನನ್ನು ಕೊಲೆ ಮಾಡಲು ಸ್ಕೆಚ್ ಹಾಕಿರುವುದಾಗಿ ತಿಳಿಸಿದ್ದಾನೆ. ನಂತರ ಪೊಲೀಸರು ವಿಶ್ವಾಸ್ ಜೊತೆ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರೆಲ್ಲರು ತಾವು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ.

case registered
ಪ್ರಕರಣ ದಾಖಲು

ಬಂಧಿತರು: ಎ1- ರಾಕೇಶ್, ಎ2- ವಿಶ್ವಾಸ್ ಅಲಿಯಾಸ್ ಜೇಟ್ಲಿ, ಎ3- ನಿತಿನ್ ಅಲಿಯಾಸ್ ವಾಸನೆ, ಎ4- ಯಶವಂತ ಅಲಿಯಾಸ್ ಬೆಂಗಳೂರು, ಎ5- ಕಾರ್ತಿಕ್ ಅಲಿಯಾಸ್ ಕಟ್ಟೆ, ಎ6- ಆಕಾಶ್ ಅಲಿಯಾಸ್ ಕಟ್ಟೆ, ಎ7- ಪ್ರವೀಣ್ ಅಲಿಯಾಸ್ ಕುಲ್ಡ, ಎ8- ಸುಹಾಸ್ ಅಲಿಯಾಸ್ ಅಪ್ಪು, ಎ9- ಸಚ್ಚಿನ್ ರಾಯ್ಕರ್, ಎ10- ಸಂಕೇತ್ ಅಲಿಯಾಸ್ ದಿಟ್ಟ, ಎ11- ರಘು ಅಲಿಯಾಸ್ ಬೊಂಡ, ಎ12- ಮಂಜು, ಎ13- ವಿಶಾಲ್ ಅಲಿಯಾಸ್ ಕೂತ್ತಾ ಬಂಧಿತರು.

case registered
ಪ್ರಕರಣ ದಾಖಲು

ಅರೆಸ್ಟ್ ಆದ ಎ9- ಸಚಿನ್ ರಾಯ್ಕರ್ ಭಜರಂಗದಳದ ಕಾರ್ಯಕರ್ತ ಹಾಗೂ ಹರ್ಷ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದಾನೆ. ಅಂದ ಹಾಗೆ ಪೊಲೀಸರ ಅತಿಥಿಯಾಗಿರುವ ಎಲ್ಲರೂ ಸಿಗೇಹಟ್ಟಿಯ ಕೆರೆ ದುರ್ಗಮ್ಮನ ಕೇರಿಯ ನಿವಾಸಿಗಳು. ಇವರೆಲ್ಲ ಹರ್ಷನ ಸ್ನೇಹಿತರಾಗಿದ್ದಾರೆ. ಸದ್ಯ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಹುಡುಗಿ ಚುಡಾಯಿಸಿದ್ದಕ್ಕೆ ಬುದ್ದಿವಾದ ಹೇಳಿದವನನ್ನೇ ಹತ್ಯೆ ಮಾಡಿದ ಯುವಕ

ಹರ್ಷ ಕೊಲೆಯ ಪ್ರತೀಕಾರಕ್ಕೆ ಅನ್ಯ ಧರ್ಮದ ಲೀಡರ್ ಅಲ್ಲಾವುದ್ದಿನ್ ಕೊಲೆ ನಡೆಸಿ ಮತ್ತೆ ಶಿವಮೊಗ್ಗದಲ್ಲಿ ಕೋಮು ಗಲಭೆ ಉಂಟು ಮಾಡುವುದು ಹಾಗೂ ಎಚ್ಚರಿಕೆಯನ್ನು ನೀಡುವುದು‌ ಇವರ ಉದ್ದೇಶವಾಗಿತ್ತು. ಎಸ್ಪಿ ಲಕ್ಷ್ಮಿಪ್ರಸಾದ್ ಅವರ ಖಡಕ್ ನಿರ್ಧಾರದಿಂದ ಫೋನ್ ಆಲಿಕೆಯಿಂದ ಎಲ್ಲರನ್ನೂ ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.