ETV Bharat / city

ಭಾರತದ ಸಂಸ್ಕೃತಿ, ಪರಂಪರೆ ಉಳಿಸಿ-ಬೆಳೆಸುತ್ತಿರುವ ಆದಿಚುಂಚನಗಿರಿ ಮಹಾಸಂಸ್ಥಾನ: ಈಶ್ವರಪ್ಪ

author img

By

Published : Jan 9, 2020, 6:01 PM IST

ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಕ್ರೀಡಾ ದಿನಾಚರಣೆ, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ಜಗತ್ತಿನ ಅನಾವರಣ ಸಮಾರಂಭ ನಡೆಯಿತು.

Adichunchangiri matt save the Indian culture
ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ನೀಡುವ ಆದಿಚುಂಚನಗಿರಿ ಮಹಾಸಂಸ್ಥಾನವು ಭಾರತದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ, ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾ ದಿನಾಚರಣೆ, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ಜಗತ್ತಿನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ

ಮಕ್ಕಳ ಪಥಸಂಚಲನದಲ್ಲಿ ನಾಡಿನ ಹಿರಿಯ ಸಾಹಿತಿಗಳನ್ನು ಗುರುತಿಸಿ ಗೌರವಿಸುವಂತೆ ಮಾಡಿರುವುದು ವಿಶೇಷ ಎಂದರು. ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಉಪಮೇಯರ್ ಚನ್ನಬಸಪ್ಪ, ಶಿವಮೊಗ್ಗ ಡಿಡಿಪಿಐ ಮಂಜುನಾಥ್, ವಿದ್ಯಾಸಂಸ್ಥೆಯ ಹಿರಿಯಣ್ಣ ಹೆಗಡೆ, ರವೀಶ್, ರಮೇಶ್, ಪ್ರಾಂಶುಪಾಲ ಗುರುರಾಜ್, ಉಪಪ್ರಾಂಶುಪಾಲೆ ನಂದರಾವ್, ಮುಖ್ಯ ಶಿಕ್ಷಕ ಆದರ್ಶ ಇದ್ದರು.

Intro:ಶಿವಮೊಗ್ಗ,

ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ನೀಡುವ ಆದಿಚುಂಚನಗಿರಿ ಮಹಾಸಂಸ್ಥಾನವು ಭಾರತದಸಂಸ್ಕøತಿ ಹಾಗೂ
ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ,
ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ವಿಶೇಷ
ಕೊಡುಗೆ ನೀಡಿದೆ ಎಂದು ಸಚಿವ
ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಶಿವಮೊಗ್ಗದ
ಶ್ರೀ ಆದಿಚುಂಚನಗಿರಿ ಟ್ರಸ್ಟ್ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ
ಕ್ರೀಡಾ ದಿನಾಚರಣೆ, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪುರಸ್ಕಾರ ಹಾಗೂ ಮಕ್ಕಳ
ಸಾಂಸ್ಕøತಿಕ ಜಗತ್ತಿನ ಅನಾವರಣದಲ್ಲಿ
ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಪಥ
ಸಂಚಲನದಲ್ಲಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಾಲನಂದನಾಥ ಮಹಾ
ಸ್ವಾಮೀಜಿ ಅವರ ಜೊತೆ ಪಾಲ್ಗೊಂಡು ನಂತರ ನಡೆದ ಕಾರ್ಯಕ್ರಮದಲ್ಲಿ
ಮಾತನಾಡುತ್ತಿದ್ದರು.
ಇಲ್ಲಿನ ಮಕ್ಕಳ ಪಥಸಂಚನಲನದಲ್ಲಿ
ನಾಡ ಎಲ್ಲಾ ಹಿರಿಯ ಸಾಹಿತಿಗಳನ್ನು
ಗುರುತಿಸುವಂತೆ, ಅವರನ್ನು ಗೌರವಿಸುವಂತೆ
ಮಾಡಿರುವುದು ವಿಶೇಷ. ವೇಧ ಘೋಷದ
ಮೂಲಕ ಭಾರತೀಯ ಸಂಸ್ಕøತಿಯನ್ನು ಎಳೆ
ಎಳೆಯಾಗಿ ಬಿಡಿಸಿ ಹೇಳಿರುವ ಆದಿ
ಚುಂಚನಗಿರಿ ವಿದ್ಯಾಲಯದ ಪರಿಕಲ್ಪನೆಯಲ್ಲಿ ಜೈಶ್ರೀ ಗುರುದೇವ್ ಮೂಳಗುವ
ಮೂಲಕ ಗುರುಗಳನ್ನು ಗೌರವಿಸುವ ಪಾಠವನ್ನು ತಿಳಿ ಹೇಳಿರುವುದು ಶ್ಲಾಘನೀಯ
ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್
ಚೆನ್ನಬಸಪ್ಪ, ಪಾಲಿಕೆ ಸದಸ್ಯರಾದ ಸುವರ್ಣ
ಶಂಕರ್, ಜ್ಞಾನೇಶ್ವರ್, ಶಿವಮೊಗ್ಗ ಡಿಡಿಪಿಐ
ಮಂಜುನಾಥ್, ವಿದ್ಯಾಸಂಸ್ಥೆಯ ಹಿರಿಯಣ್ಣ
ಹೆಗಡೆ, ರವೀಶ್, ರಮೇಶ್, ಪ್ರಾಂಶುಪಾಲ
ಗುರುರಾಜ್, ಉಪಪ್ರಾಂಶುಪಾಲೆ ನಂದರಾವ್,
ಮುಖ್ಯ ಶಿಕ್ಷಕ ಆದರ್ಶ ಮತ್ತಿತರರಿದ್ದರು
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.