ETV Bharat / city

ಆನವಟ್ಟಿಯಲ್ಲಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆ

author img

By

Published : Sep 16, 2019, 6:36 PM IST

Updated : Sep 16, 2019, 7:59 PM IST

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಆನವಟ್ಟಿ ಹೋಬಳಿಯ ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆಯಾಗಿದೆ.

ನಂದಿಕಲ್ಲು ದಾನ ಶಾಸನ

ಶಿವಮೊಗ್ಗ: ಸೊರಬ ತಾಲೂಕು ಆನವಟ್ಟಿ ಹೋಬಳಿಯ ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆಯಾಗಿದೆ.

ಆನವಟ್ಟಿಯಲ್ಲಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆ

ಚೌಕಾಕಾರದಲ್ಲಿರುವ ಈ ಶಾಸನ ಒಂದು ಮೀಟರ್​ ಎತ್ತರ ಹಾಗೂ 30 ಸೆಂ. ಮೀ. ಅಗಲವಿದೆ. ಹೊಯ್ಸಳರ ಕಾಲದ ನಂದಿಕಲ್ಲು ದಾನ ಶಾಸನ ಇದಾಗಿದ್ದು, ಇದರ ಮುಂಭಾಗದಲ್ಲಿ ಆರು ಸಾಲಿನ ಲಿಪಿ ಇದೆ. ವೀರಭದ್ರ ದೇವಾಲಯಕ್ಕೆ ಈ ಶಾಸನವಿರುವ ಭೂಮಿಯನ್ನು ದಾನ ಮಾಡಲಾಗಿದೆ ಅನ್ನೋದು ಈ ಶಾಸನದಲ್ಲಿ ಉಲ್ಲೇಖವಾಗಿದೆ. ಇದು ಕ್ರಿ.ಶ. 17 -18 ಶತಮಾನಕ್ಕೆ ಸೇರಿದ ಶಾಸನವೆಂದು ಹೇಳಲಾಗ್ತಿದೆ.

inscription
ಅಷ್ಟಲಕ್ಷ್ಮೀ ವಿಗ್ರಹ

ಮತ್ತೊಂದು ಬಾರಂಗಿ ಗ್ರಾಮದಲ್ಲೂ ಅಷ್ಟಲಕ್ಷ್ಮೀ ವಿಗ್ರಹವೊಂದು ಪತ್ತೆಯಾಗಿದ್ದು, ಇದನ್ನು ಗ್ರಾಮಸ್ಥರು ಜಿಲ್ಲಾ ಪ್ರಾಚ್ಯವಸ್ತು ಇಲಾಖೆಯ ಸಹಾಯಕ‌ ನಿರ್ದೇಶಕ ಶೇಜೇಶ್ವರ್ ಅವರಿಗೆ ನೀಡಲಾಗಿದೆ.

Intro:ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆ.

ಶಿವಮೊಗ್ಗ: ಅಪರೂಪದ ನಂದಿಕಲ್ಲು ದಾನ ಶಾಸನವೊಂದು ಪತ್ತೆಯಾಗಿದೆ. ಸೊರಬ ತಾಲೂಕು ಆನವಟ್ಟಿ ಹೊಬಳಿಯ ನೇರಲಗಿ ಗ್ರಾಮದಲ್ಲಿ ಅಪರೂಪದ ನಂದಿಕಲ್ಲು ದಾನ ಶಾಸನ ಪತ್ತೆಯಾಗಿದೆ. ಇದು ನೇರಲಗಿ ಗ್ರಾಮದ ಬಯಲು ಬಸವೇಶ್ವರ ದೇವಸ್ಥಾನದ ಹತ್ತಿರ ಪತ್ತೆಯಾಗಿದೆ. ಇದು ಒಂದು ಮೀಟರ್ ಎತ್ತರ, ಮೂವತ್ತು ಸೆಂಟಿ ಮೀಟರ್ ಅಗಲವಿದೆ. ಇದು ಚೌಕಕಾರವಾಗಿದೆ.Body:ಇದರ ಮುಂಭಾಗದಲ್ಲಿ ಶಾಸನವಿದ್ದು ಅದು ಆರು ಸಾಲಿನಿಂದ ಕೊಡಿದೆ. ಇದರಲ್ಲಿ ವೀರಭಧ್ರ, ದೇವರ ಆ ಮುತ್ತ ಪಡಿ, ಗೆ ಬಸವ ಹೊಲ ಕೊ ಟರು. ವೀರಭದ್ರ ದೇವಾಲಯದ‌ಕ್ಕೆ ಭೂಮಿಯನ್ನು ದಾನ ಮಾಡಲಾಗಿದೆ.ಇದು‌ ಕ್ರಿ.ಶ 17 -18 ಶತಮಾನದ್ದಾಗಿದೆ.Conclusion:ಈ ಭೂಮಿಯನ್ನು ದೇವಾಲಯಕ್ಕೆ ದಾನ‌ ನೀಡಿದ್ದಾಗಿದೆ ಎಂದು ಬರೆಯಲಾಗಿದೆ.ಇದನ್ನು ಜಿಲ್ಲಾ ಪ್ರಾಚ್ಯ ವಸ್ತು ಇಲಾಖೆಯ ಸಹಾಯಕ‌ ನಿರ್ದೆಶಕರಾದ ಶೇಜೇಶ್ವರ್ ಪತ್ತೆ ಮಾಡಿದ್ದಾರೆ. ಇದರ ಜೊತೆಗೆ ಅಷ್ಟ ಲಕ್ಷ್ಮೀಯ ಹೊಸ್ಸಳರ ಕಾಲದ ಕಲ್ಲಿನ ಶಾಸವನ್ನು ಬಾರಂಗಿ ಗ್ರಾಮದವರು ಶೇಜೇಶ್ವರ್ ರವರಿಗೆ ದಾನ ನೀಡಿದ್ದಾರೆ.
Last Updated :Sep 16, 2019, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.