ETV Bharat / city

ದೇಶಕ್ಕೆ ಕಾಂಗ್ರೆಸ್ ಬೇಡವಾಗಿದೆ: ಸಚಿವ ಆರ್.ಅಶೋಕ್

author img

By

Published : Nov 21, 2021, 7:47 AM IST

ಜನ ಸ್ವರಾಜ್​ ಯಾತ್ರೆಯಲ್ಲಿ ಕಾಂಗ್ರೆಸ್​ ಪಕ್ಷದ ಮೇಲೆ ಕಮಲ ಪಾಳಯ ವಾಗ್ದಾಳಿ ಮುಂದುವರೆಸಿದೆ. ಕಾಂಗ್ರೆಸ್​​ ಎಲ್ಲ ರಾಜ್ಯಗಳಲ್ಲೂ ಸೋಲುತ್ತಿದ್ದು, ಜನರಿಗೆ ಬೇಡವಾಗಿದೆ. ಯಾವುದೇ ವಿಧೇಯಕಗಳನ್ನು ಜಾರಿಗೊಳಿಸಲು ಅವರು ಬಿಡುವುದಿಲ್ಲ. ಅದಕ್ಕಾಗಿ ನಮಗೆ ವಿಧಾನ ಪರಿಷತ್​ನಲ್ಲಿಯೂ ಬಹುಮತ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಸಚಿವ ಅಶೋಕ್ ಮನವಿ ಮಾಡಿದರು.

r-ashok-slams-congress-party
ಆರ್​ ಅಶೋಕ್​

ಮೈಸೂರು: ಕಾಂಗ್ರೆಸ್ ಎಲ್ಲ ದೇಶದ ರಾಜ್ಯಗಳಲ್ಲೂ ಸೋಲುತ್ತಿದೆ. ಅವರ ಆಡಳಿತ ಇರುವ ಗೋವಾದಲ್ಲಿ ಈ ಬಾರಿ ಚುನಾವಣೆ ನಡೆದರೆ ಒಂದು ಸ್ಥಾನವೂ ಬರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.


ನಗರದ ವಸ್ತುಪ್ರದರ್ಶನ ಆವರಣದಲ್ಲಿ ಏರ್ಪಡಿಸಿದ್ದ 'ಜನ ಸ್ವರಾಜ್ ಯಾತ್ರೆ' (BJP Janaswaraj Yatra) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಅನುಕೂಲ ಕಲ್ಪಿಸುವ ಯಾವುದೇ ವಿಧೇಯಕಗಳನ್ನು ಜಾರಿಗಳಿಸಲು ನಮಗೆ ವಿಧಾನ ಪರಷತ್‌ನಲ್ಲೂ ಬಹುಮತ ಬೇಕಾಗಿದೆ. ಹಾಗಾಗಿ, ಇದು ಪ್ರಮುಖ ಚುನಾವಣೆಯಾಗಿದೆ. ಬಿಜೆಪಿ ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ಜನ ಸ್ವರಾಜ್ ಸಮಾವೇಶದ ಮೂಲಕ ಪ್ರಚಾರ ಮಾಡುತ್ತಿದೆ. ಆದರೆ, ಕಾಂಗ್ರೆಸ್​ ಮತ್ತು ಜೆಡಿಎಸ್‌ ಟಿಕೆಟ್ ಹಂಚಿಕೆಯ ಗೊಂದಲದಲ್ಲೇ ಇವೆ ಎಂದರು.

ಗ್ರಾಮ ಪಂಚಾಯಿತಿ ಹಾಗೂ ಸದಸ್ಯರ ಸಮಸ್ಯೆ ಬಗ್ಗೆ ವಿಧಾನ ಪರಿಷತ್‌ನಲ್ಲಿ ಮಾತನಾಡಲು ನಮ್ಮ ಅಭ್ಯರ್ಥಿ ಬೇಕಾಗಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಆರ್.ರಘು ಕೌಟಿಲ್ಯ ಅವರಿಗೆ ಶಕ್ತಿ ನೀಡಬೇಕು. ಆ ಮೂಲಕ ಜನಪರ ಯೋಜನೆಗಳನ್ನು ಜಾರಿ ಮಾಡಲು ಕೈಜೋಡಿಸಬೇಕು ಎಂದು ಸಚಿವ ಅಶೋಕ್​ ಹೇಳಿದರು.

ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು?: ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಜಿಲ್ಲೆಗೆ ಕೊಟ್ಟಿರುವ ಕೊಡುಗೆಯಾದರೂ ಏನು ಎಂಬುದನ್ನು ತಿಳಿಸಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಮುಸ್ಲಿಮರಿಗೆ ಶಾದಿ ಭಾಗ್ಯ ಯೋಜನೆ, ಹಿಂದು ವಿರೋಧಿ ಟಿಪ್ಪು ಜಯಂತಿ ಆಚರಣೆ, ಮಕ್ಕಳಲ್ಲಿ ಜಾತಿ ಆಧಾರದ ಮೇಲೆ ಶೂ ನೀಡಿದ್ದು ಸಿದ್ದರಾಮಯ್ಯ ಅವರ ಸಾಧನೆ ಎಂದು ಟೀಕಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.