ETV Bharat / city

ಬಹಿರಂಗ ಚರ್ಚೆಗೆ ಡೇಟ್ ಫಿಕ್ಸ್ ಮಾಡಿದ ಲಕ್ಷ್ಮಣ್: ಜೂ. 29 ಪ್ರತಾಪಸಿಂಹ ಪಟಾಲಂ ಜೊತೆ ಬರಲಿ

author img

By

Published : Jun 25, 2022, 2:32 PM IST

ಪ್ರವಾಸಿಗರು ಭೇಟಿ ನೀಡುವ ತಾಣಗಳ ಪೈಕಿ ಇಡೀ ಏಷ್ಯಾದಲ್ಲೇ ಮೈಸೂರು 4ನೇ ಸ್ಥಾನದಲ್ಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ ಎಂದು ನರೇಂದ್ರ ಮೋದಿ ಭೇಟಿಯಿಂದ ಮೈಸೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಡಿದ ಲಕ್ಷ್ಮಣ್.

KPCC State Spokesperson M Laxman spoke at the news conference.
ಕೆಪಿಸಿಸಿ ರಾಜ್ಯ ವಕ್ತಾರ ಎಂ‌.ಲಕ್ಷ್ಮಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು : ಮೈಸೂರು ಅಭಿವೃದ್ಧಿ ವಿಚಾರವಾಗಿ, ಸಂಸದ ಪ್ರತಾಪಸಿಂಹರ ಜೊತೆ ಬಹಿರಂಗವಾಗಿ ಚರ್ಚಿಸಲು, ಕೆಪಿಸಿಸಿ ರಾಜ್ಯ ವಕ್ತಾರ ಎಂ‌.ಲಕ್ಷ್ಮಣ್ ಡೇಟ್ ಫಿಕ್ಸ್ ಮಾಡಿ, ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಕಚೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ‌. 29ರಂದು ಮಧ್ಯಾಹ್ನ 12ರ ವೇಳೆಗೆ ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿ ಮುಂದೆ, ಒಂದು ಕುರ್ಚಿ, ಎರಡು ಟೇಬಲ್ ತೆಗೆದುಕೊಂಡು ನಾನೊಬ್ಬನೇ ಹೋಗುತ್ತಾನೆ. ದಾಖಲಾತಿಗಳೊಂದಿಗೆ ಚರ್ಚೆ ಮಾಡುತ್ತೇನೆ‌‌. ಪ್ರತಾಪಸಿಂಹ ಅವರೇ ನೀವು ಪಟಾಲಂ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದ್ದಾರೆ.

ಸ್ವಂತ ವರ್ಚಸ್ಸಿನ ಮೇಲೆ ಇಬ್ಬರು ಗ್ರಾಪಂ ಚುನಾವಣೆಗೆ ಸ್ಪರ್ಧಿಸೋಣ. ಯಾರು ಗೆಲ್ಲುತ್ತಾರೋ ನೋಡೋಣ.‌ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಾಂಗ್ರೆಸ್​ನ ಮುಖಂಡರು ಮಾತನಾಡುತ್ತಾರೆ. ಅದಕ್ಕೆಲ್ಲ ಮೋದಿ - ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ಉತ್ತರ ಕೊಡುತ್ತಾರೆಯೇ? ಮಾಧ್ಯಮ ವಕ್ತಾರರು ಉತ್ತರ ಕೊಡುತ್ತಾರೆ‌. ಅದೇ ರೀತಿ ನನಗೆ ವಕ್ತಾರರನ್ನಾಗಿ ಮಾಡಲಾಗಿದೆ. ನಾನೇ ನಿಮಗೆ ಉತ್ತರ ಕೊಡುತ್ತೇನೆ. ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಬೇಕಿಲ್ಲ ಎಂದು ಕಿಡಿಕಾರಿದರು.

ಕೆಪಿಸಿಸಿ ರಾಜ್ಯ ವಕ್ತಾರ ಎಂ‌.ಲಕ್ಷ್ಮಣ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಭೇಟಿಯಿಂದ ಮೈಸೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ವ್ಯಂಗ್ಯವಾಡಿದ ಲಕ್ಷ್ಮಣ್, ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ‌. ಅಂದಿನ ಮೈಸೂರು ಅರಸರ ಕಾಲದಿಂದಲೂ ಯೋಗ ಇದೆ. ಪ್ರವಾಸಿಗರು ಭೇಟಿ ನೀಡುವ ತಾಣಗಳ ಪೈಕಿ ಇಡೀ ಏಷ್ಯಾದಲ್ಲೇ ಮೈಸೂರು 4ನೇ ಸ್ಥಾನದಲ್ಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೂ ಬಿಜೆಪಿಯವರು ಮೋದಿ ಭೇಟಿಯಿಂದಲೇ ಮೈಸೂರು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು.

ಮೋದಿ ಭೇಟಿಯಿಂದ ಮೈಸೂರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮೋದಿ ಮೈಸೂರು ಭೇಟಿ ವಿಚಾರದಲ್ಲೂ ಬಿಜೆಪಿ ನಾಯಕರ ನಡುವೆ ಕ್ರೆಡಿಟ್ ವಾರ್ ನಡೆಯಿತು ಎಂದು ಛೇಡಿಸಿದರು.

ಇದನ್ನೂ ಓದಿ : ಪ್ರಧಾನಿ ಸಂಚರಿಸಿದ ರಸ್ತೆಯೇ ಕಳಪೆ, ಅಭಿವೃದ್ಧಿ ಮಾದರಿ ಅಂದ್ರೆ ಇದೇನಾ?: ಬಿಜೆಪಿ ವಿರುದ್ಧ ಹೆಚ್​ಡಿಕೆ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.