ETV Bharat / city

ಎಂ ಬಿ ಪಾಟೀಲ್- ಸಚಿವ ಅಶ್ವತ್ಥ್​ ನಾರಾಯಣ್ ಭೇಟಿ ಬಗ್ಗೆ ನೋ ಕಮೆಂಟ್ಸ್​: ಸಿದ್ದರಾಮಯ್ಯ

author img

By

Published : May 11, 2022, 8:13 PM IST

ಸಚಿವ ಅಶ್ವತ್ಥ್​ ನಾರಾಯಣ ಅವರನ್ನು ಎಂ ಬಿ ಪಾಟೀಲ್​ ಭೇಟಿ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್​ ಮಾಡಿದ ಆರೋಪದ ಬಗ್ಗೆ ನಾನು ಮಾತನಾಡಲ್ಲ. ಈ ಬಗ್ಗೆ ಎಂ.ಬಿ. ಪಾಟೀಲ್​ ಸ್ಪಷ್ಟನೆ ನೀಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

former-cm-siddaramaiah
ಸಿದ್ದರಾಮಯ್ಯ

ಮೈಸೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಮತ್ತು ಕಾಂಗ್ರೆಸ್​ನ ಮಾಜಿ ಸಚಿವ ಎಂ.ಬಿ ಪಾಟೀಲ್ ಭೇಟಿ ವಿಚಾರದಲ್ಲಿ ನಾನು ಏನೂ ಪ್ರತಿಕ್ರಿಯಿಸಲ್ಲ. ಈ ಬಗ್ಗೆ ಸ್ವತಃ ಎಂ.ಬಿ ಪಾಟೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಸೋ ನೋ ಕಮೆಂಟ್ಸ್ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥ್​ ನಾರಾಯಣ ಮತ್ತು ಎಂ.ಬಿ. ಪಾಟೀಲ್ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿಕೆ ನೀಡಿದ್ದಾರೆ. ಈ ಪ್ರಶ್ನೆಯನ್ನು ಮತ್ತೆ ಏಕೆ ಕೇಳುತ್ತೀರಿ? ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಮಾಜಿ ಸಚಿವ ಎಂ ಬಿ ಪಾಟೀಲ್- ಸಚಿವ ಅಶ್ವತ್ಥ್​ ಭೇಟಿ ಬಗ್ಗೆ ಮಾತನಾಡಲ್ಲ: ಸಿದ್ದರಾಮಯ್ಯ

ನೋಟಿಸ್​ ನೀಡಿದ್ದಕ್ಕೆ ವರ್ಗಾವಣೆ: ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರನಾಥ್ ಅವರು ರಾಜೀನಾಮೆ ನೀಡಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಪಡೆದ ಪ್ರಭಾವಿಗಳಿಗೆ ಅವರು ನೋಟಿಸ್ ಕೊಟ್ಟಿದ್ದರು. ಅದೇ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಒಂದು ವೇಳೆ ಸರ್ಕಾರ ಹಾಗೆ ಮಾಡಿದರೆ ಅದು ಮಹಾ ಅಪರಾಧವಾಗುತ್ತದೆ. ಬಿಜೆಪಿ ಸರ್ಕಾರವೇ ಭ್ರಷ್ಟ ಸರ್ಕಾರ. ಸರ್ಕಾರಕ್ಕೆ ಫ್ರೀ ಹ್ಯಾಂಡ್ ಇಲ್ಲ. ಇನ್ನೂ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡುತ್ತಾರಾ ಎಂದು ವ್ಯಂಗ್ಯವಾಡಿದರು.

ಮೀಸಲಾತಿ ಇಲ್ಲದೇ ಚುನಾವಣೆ ಬೇಡ: ರಾಜಕೀಯ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್​ ಆದೇಶದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗೆ ಮನಸ್ಸಿದ್ರೆ ಈಗಲೂ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದು. ಜಾತಿವಾರು ಗಣತಿಯನ್ನು ಸ್ವೀಕರಿಸಿದ್ರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಮೀಸಲಾತಿ ಸಮಸ್ಯೆ ಬಗೆಹರಿಸದೇ ಚುನಾವಣೆಗೆ ಹೋಗಬಾರದು ಎಂದು ಹೇಳಿದ್ದಾರೆ.

ಓದಿ: ಸಂಪುಟ ಸರ್ಕಸ್​.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.