ETV Bharat / city

ಕೊರೊನಾ ನಿಯಮ ಉಲ್ಲಂಘನೆ: 13 ಮಂದಿ ವಿರುದ್ಧ ಪ್ರಕರಣ ದಾಖಲು

author img

By

Published : Apr 20, 2021, 6:02 PM IST

ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸದೆ ಮದುವೆ ಮತ್ತು ಮೆಗಾ ಮಾರ್ಟ್​​ ಹಾಗೂ ಸಮುದಾಯ ಭವನ, ಬಾರ್​ ಅಂಡ್​ ರೆಸ್ಟೋರೆಂಟ್​ಗಳಲ್ಲಿ ಬೇಜಾವಾಬ್ದಾರಿತನ ತೋರಲಾಗುತ್ತಿತ್ತು. ಈ ಹಿನ್ನೆಲೆ ದಾಳಿ ನಡೆಸಿ 13 ಜನ ಮಾಲೀಕರು ಮತ್ತು ಉಸ್ತುವಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊರೊನಾ ನಿಯಮ ಉಲ್ಲಂಘನೆ
ಕೊರೊನಾ ನಿಯಮ ಉಲ್ಲಂಘನೆ

ಮೈಸೂರು: ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಕೋವಿಡ್​ ಭೀತಿ ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಸಾಮಾಜಿಕ ಅಂತರ ಮತ್ತು ಮಾಸ್ಕ್​ ಧರಿಸದೆ ಮದುವೆ ಮತ್ತು ಮೆಗಾ ಮಾರ್ಟ್​​ ಹಾಗೂ ಸಮುದಾಯ ಭವನ, ಬಾರ್​ ಅಂಡ್​ ರೆಸ್ಟೋರೆಂಟ್​ಗಳಲ್ಲಿ ಬೇಜಾವಾಬ್ದಾರಿತನ ತೋರಲಾಗುತ್ತಿತ್ತು. ಈ ಹಿನ್ನೆಲೆ ದಾಳಿ ನಡೆಸಿ 13 ಜನ ಮಾಲೀಕರು ಮತ್ತು ಉಸ್ತುವಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಶ್ವಿನಿ ಕಲ್ಯಾಣ ಮಂಟಪದ ಮದುವೆ ಉಸ್ತುವಾರಿ ವಹಿಸಿದ್ದ ಮಾದೇಗೌಡ, ನ್ಯೂ ವೈಭವ್ ಬಾರ್ ಮ್ಯಾನೇಜರ್, ವಿಶಾಲ್ ಮೆಗಾ ಮಾರ್ಟ್ ಮಾಲೀಕ, ಲೋಕಾಭಿರಾಮ ಸಮುದಾಯ ಭವನದ ಮದುವೆ ಆಯೋಜಕ, ಆನಂದ್ ಬ್ರದರ್ಸ್ ಮಾಲೀಕ ಶ್ರೀನಿವಾಸ್, ಟು ಪಿನ್ ರೆಸ್ಟೋರೆಂಟ್ ಮಾಲೀಕ, ಟೀ ಹೋಟೆಲ್ ಮಾಲೀಕ ಮಹಮ್ಮದ್ ರಜಾಕ್, ಟಿಪ್ಪು ಜ್ಯೂಸ್ ಸೆಂಟ್ ಮಾಲೀಕ ತೌಸಿಪ್ ಖಾನ್ ವಿರುದ್ಧ ಡಿಸಾಸ್ಟರ್ ಮ್ಯಾನೆಜ್‌ಮೆಂಟ್‌ ಆಕ್ಟ್ 2005ರ ಅಡಿಯಲ್ಲಿ ಪ್ರಕರಣ‌ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.