ETV Bharat / city

ಪರಿಷತ್ ಚುನಾವಣೆ..ಎಲ್ಲಾ ಕ್ಷೇತ್ರದಲ್ಲಿಯೂ ಬಿಜೆಪಿ ಪರವಾದ ವಾತಾವರಣವಿದೆ: ಬಿ.ವೈ.ವಿಜಯೇಂದ್ರ

author img

By

Published : Dec 2, 2021, 5:09 PM IST

ಮಂಡ್ಯದಲ್ಲಿ ಯಾರು ನಮ್ಮ ಅಭ್ಯರ್ಥಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಅಲ್ಲಿ ತ್ರಿಕೋನ ಸ್ಪರ್ಧೆ ಇದೆ. ಡಿ.5ರಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೈಸೂರು, ಮಂಡ್ಯ ಮತ್ತು ಚಾಮರಾಜ ನಗರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ‌ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

BJP state vice president BY Vijayendra
ಬಿಜೆಪಿ ರಾಜ್ಯ‌ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಬಿಜೆಪಿ ಪರವಾದ ವಾತಾವರಣ ಇದೆ. ಮೈಸೂರಿನಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯ‌ ಉಪಾಧ್ಯಕ್ಷ ಬಿ.ವೈ‌. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ‌ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಯಾರು ನಮ್ಮ ಅಭ್ಯರ್ಥಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಅಲ್ಲಿ ತ್ರಿಕೋನ ಸ್ಪರ್ಧೆ ಇದೆ. ಡಿ.5ರಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೈಸೂರು, ಮಂಡ್ಯ ಮತ್ತು ಚಾಮರಾಜ ನಗರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲ, ಅಲ್ಲಿ ಬೆಂಬಲ ನೀಡಿ ಎಂದು. ಅಭ್ಯರ್ಥಿ ಕಣದಲ್ಲಿರುವ ಕ್ಷೇತ್ರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಮೈಸೂರು, ಚಾಮರಾಜ ನಗರ ಮತ್ತು ಮಂಡ್ಯದಲ್ಲಿ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿರುವ ಆರೋಪ ಭಯ ತರಿಸಿದೆ:

ಶಾಸಕ ಹೆಚ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿರುವ ಆರೋಪ ಭಯ ತರಿಸಿದೆ. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಅಕ್ಕ-ಪಕ್ಕದ ರಾಜ್ಯದಲ್ಲಿ ಈ ರೀತಿ ವಾತಾವರಣ ಇತ್ತು ಎಂದು ಬಿ.ವೈ‌. ವಿಜಯೇಂದ್ರ ಹೇಳಿದರು. ವಿಶ್ವನಾಥ್ ಒಬ್ಬ ಪ್ರಭಾವಿ ರಾಜಕಾರಣಿ. ಸಾಕಷ್ಟು ಬಾರಿ ಗೆಲವು ಸಾಧಿಸಿದ್ದಾರೆ. ಇದು ಭಯ ಸೃಷ್ಟಿ ಮಾಡುವಂತಹ ಘಟನೆ. ಬಿಜೆಪಿ ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದರು.

ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಆ ಕ್ಷೇತ್ರದಲ್ಲಿ ಯಾರ ಜತೆ ರೌಡಿಗಳು ಇದ್ದಾರೆ ಅನ್ನೋದು ಆ ಕ್ಷೇತ್ರದ ಜನರಿಗೆ ಗೊತ್ತಿದೆ. ಘಟನೆ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಇದೆ. ಡಿಕೆಶಿ ಅವರದ್ದು ಉಡಾಫೆ ಹೇಳಿಕೆ. ಇಂತಹದನ್ನು ಯಾರು ಸಮರ್ಥನೆ ಮಾಡಬಾರದು. ಈ ರೀತಿಯ ಸಂಸ್ಕೃತಿ ಇಲ್ಲಿಗೆ ಕೊನೆಯಾಗಬೇಕು. ಈ ಬಗ್ಗೆ ಸಿಎಂ ಸಹ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ‌ ಎಂದರು.

ಇದನ್ನೂ ಓದಿ: ಕುಳ್ಳ ದೇವರಾಜ್ ಕೊಟ್ಟ ತಪ್ಪೊಪ್ಪಿಗೆ ಪತ್ರ, ಪೆನ್ ಡ್ರೈವ್ ಕೊಟ್ಟಿದ್ದೇನೆ: ವಿಚಾರಣೆ ಬಳಿಕ ಶಾಸಕ ವಿಶ್ವನಾಥ್ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.