ETV Bharat / city

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ.. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಡಿಗೆ ತಲೆದೂಗಿದ ಮಕ್ಕಳು..

author img

By

Published : Jan 29, 2022, 1:46 PM IST

ನಿನ್ನೆ ರಾತ್ರಿ ಶಕ್ತಿಧಾಮದ ಮಕ್ಕಳೊಂದಿಗೆ ಊಟ ಮಾಡಿದ ನಟ ಶಿವ ರಾಜ್​ಕುಮಾರ್ ನಂತರ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಹಾಡನ್ನು ಹಾಡಿ ಮಕ್ಕಳನ್ನು ಖುಷಿ ಪಡಿಸಿದರು..

Actor Shivarajkumar sing a song in Shakthi dhama Ashrama
ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಡು ಕೇಳಿ ಮೈ ಮರೆತ ಮಕ್ಕಳು

ಮೈಸೂರು : ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೇ ಹಾಡನ್ನು ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಹಾಡಿದ್ದು, ಅವರ ಹಾಡಿಗೆ ಮಕ್ಕಳು ಮೈ ಮರೆತರು.

ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಡು ಕೇಳಿ ಮೈಮರೆತ ಮಕ್ಕಳು..

ಹಲವು ದಿನಗಳಿಂದ ಮೈಸೂರಿನಲ್ಲಿ ವೇದ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ ಅವರು, ಜ.26ರಂದು ಶಕ್ತಿಧಾಮ ಆಶ್ರಮದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಿವರಾಜ್‌​ಕುಮಾರ್, ಪತ್ನಿ ಗೀತಾ ಶಿವರಾಜ್​ಕುಮಾರ್ ಧ್ವಜಾರೋಹಣ ನೆರವೇರಿಸಿದ್ದರು. ಧ್ವಜಾರೋಹಣ ಬಳಿಕ ಶಿವಣ್ಣ ಅನಾಥ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಕ್ಕಳಿಗಾಗಿ ಬಸ್ ಓಡಿಸಿದ್ದರು.

ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜತೆ 73ನೇ ಗಣರಾಜ್ಯೋತ್ಸವ.. ಡ್ರೈವ್‌ ಮಾಡಿ ಮಕ್ಕಳ ಆಸೆ ಪೂರೈಸಿದ ಸಿಂಪ್ಲಿಸಿಟಿ ಶಿವಣ್ಣ..

ನಿನ್ನೆ ರಾತ್ರಿ ಶಕ್ತಿಧಾಮದ ಮಕ್ಕಳೊಂದಿಗೆ ಊಟ ಮಾಡಿ ನಂತರ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಹಾಡನ್ನು ಹಾಡಿ ಮಕ್ಕಳನ್ನು ಖುಷಿ ಪಡಿಸಿದರು. ಹಲವು ದಿನಗಳಿಂದ ಶಿವರಾಜ್​ಕುಮಾರ್ ಶಕ್ತಿಧಾಮಕ್ಕೆ ಭೇಟಿ ಕೊಡುತ್ತಿರುವುದು, ಮಕ್ಕಳಿಗೆ ಸ್ಫೂರ್ತಿ ತುಂಬಿದಂತಾಗಿದೆ‌ ಎಂದರೆ ತಪ್ಪಾಗಲಾರದು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.