ETV Bharat / city

Heavy rain in Mysore : ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿಯೆಷ್ಟು!?

author img

By

Published : Nov 20, 2021, 4:13 PM IST

ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿದೆ. ಕಳೆದ 7 ದಿನಗಳಿಂದ ಸುರಿದ ಭಾರಿ (heavy rain in Mysore) ಮಳೆಯಿಂದಾಗಿ 1994 ಮನೆಗಳಿಗೆ ಹಾನಿಯಾಗಿವೆ. 550 ಹೆಕ್ಟೇರ್​ ಬೆಳೆ ನಾಶ ಸೇರಿದಂತೆ ಅಪಾರ ಪ್ರಮಾಣ ಆಸ್ತಿ ನಷ್ಟ ಉಂಟಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್​ ಟಿ ಸೋಮಶೇಖರ್​​ ಮಾಹಿತಿ ನೀಡಿದ್ದಾರೆ..

3-killed-1994-houses-damage-due-to-rains-in-mysuru
ಮೈಸೂರು ಮಳೆ

ಮೈಸೂರು : ಜಿಲ್ಲೆಯಾದ್ಯಂತ ಮಳೆಯಿಂದಾಗಿರುವ ಹಾನಿಯ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದರು.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 7 ದಿನದಿಂದ‌ ಶೇ.530ರಷ್ಟು ಮಳೆಯಾಗಿದೆ. ಕಳೆದ‌ ನವೆಂಬರ್​ನಲ್ಲಿ ‌ಶೇ.‌230 ರಷ್ಟು ಮಳೆ ಆಗಿತ್ತು. ಮಳೆಯಿಂದ ಒಟ್ಟು 1994 ಮನೆಗಳಿಗೆ ಹಾನಿಯಾಗಿದೆ.

87 ಮನೆ ಸಂಪೂರ್ಣವಾಗಿ ಹಾನಿಯಾಗಿವೆ. 1907 ಮನೆಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. 3 ಮಂದಿ ಸಾವನ್ನಪ್ಪಿದ್ದಾರೆ. 500 ಹೆಕ್ಟೇರ್ ಬೆಳೆ ನಾಶವಾಗಿದೆ. 1100 ಕಿ.ಮೀ ನಗರ ಹಾಗೂ 500 ಕಿ.ಮೀ ಗ್ರಾಮೀಣ ಭಾಗದ ರಸ್ತೆಗೆ ಹಾನಿಯಾಗಿದೆ. 67 ಶಾಲೆಗಳು, ‌33 ಪಿಎಸ್​ಸಿಎಸ್, 133 ಎಲೆಕ್ಟ್ರಿಕ್ ಪೋಸ್ಟ್​ಗಳಿಗೆ ಹಾನಿಯಾಗಿದೆ ಎಂದು ಸಚಿವರು ‌ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟದ ರಸ್ತೆ ಕುಸಿತ ‌ಸರಿಪಡಿಸಲು 9.5 ಕೋಟಿ ರೂ. ಅಂದಾಜು ಮಾಡಲಾಗಿದೆ. ಇನ್ನು ಮಳೆ ನಿಂತಿಲ್ಲ.‌ ಮಳೆ ನಿಂತು ಬಿಸಿಲು‌ ಬಂದಾಗ‌ ಅಂತಿಮ‌ವಾಗಿ‌ ‌ಎಸ್ಟಿಮೇಟ್ ಮಾಡಿ ಎಂದು ಮಾಹಿತಿ ನೀಡಿದ್ದೇವೆ. ಈಗಾಗಲೇ ‌ಮಳೆ ಹಾನಿ ವರದಿಯನ್ನು ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

ವರ್ಚುಯಲ್ ಮೂಲಕ‌ ಸಿಎಂ ಮಾಹಿತಿ ಸಂಗ್ರಹಿಸಿದ್ದಾರೆ. ನಾಳೆ‌ ಸಿಎಂ‌ ಕೊಡಗಿಗೆ ಬರಲಿದ್ದಾರೆ. ವೈಯುಕ್ತಿಕವಾಗಿ ಅವರಿಗೆ ಮಾಹಿತಿ ನೀಡಲಿದ್ದೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.