ನಕಲಿ ಎಟಿಎಂ ಕಾರ್ಡ್​ ಬಳಸಿ ಲಕ್ಷಾಂತರ ರೂ. ವಂಚನೆ

author img

By

Published : Nov 25, 2021, 1:58 PM IST

Updated : Nov 25, 2021, 2:08 PM IST

ಮಂಗಳೂರು,  mangalore

ಮಂಗಳೂರಿನಲ್ಲಿ ವಿವಿಧ ಬ್ಯಾಂಕ್​ಗಳ ನಕಲಿ ಎಟಿಎಂ ಕಾರ್ಡ್​ ಬಳಸಿ ಲಕ್ಷಾಂತರ ರೂ. ವಂಚಿಸಿರುವ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ವಿವಿಧ ಬ್ಯಾಂಕ್​ಗಳ ನಕಲಿ ಎಟಿಎಂ ಕಾರ್ಡ್​ ಬಳಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಟೋಬರ್ 24 ರಂದು ಬೆಳಗ್ಗೆ ಮಂಗಳೂರಿನ ಕಾರ್ ಸ್ಟ್ರೀಟ್​ನಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್​ನ ಎಟಿಎಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಇಂಡಿಯನ್ ಬ್ಯಾಂಕ್ ಗ್ರಾಹಕನ ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಬಿಡಿಸಿಕೊಂಡಿದ್ದಾನೆ.

ಇದನ್ನೂ ಓದಿ: ಮದುವೆ ಮನೆಯ ಡಿಜೆ ಸೌಂಡ್​ಗೆ 63 ಕೋಳಿಗಳು ಬಲಿ: ಪೌಲ್ಟ್ರಿ ಮಾಲೀಕ ಆರೋಪ

ಮೊದಲು 27 ಸಾವಿರ ರೂ. ಹಾಗೂ 11 ಗಂಟೆ ಸುಮಾರಿಗೆ ಫೆಡರಲ್ ಬ್ಯಾಂಕ್ ಗ್ರಾಹಕನ ನಕಲಿ ಎಟಿಎಂ ಕಾರ್ಡ್ ಬಳಸಿ 9,800 ರೂ. ಮತ್ತು ಸಂಜೆ 7.30 ಕ್ಕೆ ಕರೂರು ವೈಶ್ಯ ಬ್ಯಾಂಕ್ ಗ್ರಾಹಕನ ನಕಲಿ ಎಟಿಎಂ ಕಾರ್ಡ್ ಬಳಸಿ 30,000 ರೂ. ಪಡೆದಿದ್ದಾನೆ.

ಇದನ್ನೂ ಓದಿ: 'ಈಟಿವಿ ಭಾರತ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಮರುದಿನ ಮತ್ತೆ ಕರೂರು ವೈಶ್ಯ ಬ್ಯಾಂಕ್ ಗ್ರಾಹಕರೊಬ್ಬರ ನಕಲಿ ಎಟಿಎಂ ಕಾರ್ಡ್ ಬಳಸಿ 20,000 ರೂ. ಹಣ ಡ್ರಾ ಮಾಡಿದ್ದಾನೆ. ಈತನ ವರ್ತನೆಯನ್ನು ನೋಡಿ ಅನುಮಾನಗೊಂಡ ವಾಚ್​ಮ್ಯಾನ್, ಆತನನ್ನು ಹಿಡಿದು ವಿಚಾರಣೆ ಮಾಡಲು ಮುಂದಾದಾಗ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated :Nov 25, 2021, 2:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.