ETV Bharat / city

ಆನ್​ಲೈನ್ ಮೂಲಕ ಹಣ ಸಂಪಾದನೆಗೆ ಆಮಿಷ: 1.31 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ

author img

By

Published : Nov 26, 2021, 9:03 AM IST

ಹೆಚ್ಚಿನ ಬೋನಸ್ ನೀಡುವುದಾಗಿ ನಂಬಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಆನ್​ಲೈನ್​ ವಂಚಕರು 1.31 ಲಕ್ಷ ರೂ. ಮೋಸ ಮಾಡಿರುವ ಕುರಿತು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Mangalore, ಮಂಗಳೂರು
Mangalore

ಮಂಗಳೂರು: ಆನ್​ಲೈನ್ ಮೂಲಕ ಹಣ ಸಂಪಾದನೆ ಮಾಡಬಹುದು ಎಂಬ ಆಮಿಷವನ್ನು ನಂಬಿ ಮಂಗಳೂರಿನ ವ್ಯಕ್ತಿಯೊಬ್ಬರು 1.31 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ವ್ಯಕ್ತಿಗೆ ಏಪ್ರಿಲ್ 2021ರಲ್ಲಿ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್​​​​​ನಲ್ಲಿ ಮೆಸೇಜ್ ಬಂದಿದ್ದು, amazer2.com ಎಂಬ ಜಾಲತಾಣದಲ್ಲಿ ನೋಂದಣಿ ಮಾಡಿ ಹಣ ಗಳಿಸಬಹುದು ಎಂಬ ಆಮಿಷವೊಡ್ಡಲಾಗಿತ್ತು‌. ಅದರಂತೆ ಈ ವ್ಯಕ್ತಿ 200 ರೂ. ಪಾವತಿಸಿ ಆ ವೆಬ್ ಸೈಟ್​ನಲ್ಲಿ ಖಾತೆ ತೆರೆದಿದ್ದರು. ಬಳಿಕ ಹೆಚ್ಚಿನ ಬೋನಸ್ ನೀಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಮಂಗಳೂರಿನ ವ್ಯಕ್ತಿ, ಅವರ ವಿವಿಧ ಖಾತೆಗಳಿಗೆ 1, 31, 481 ರೂ. ಪಾವತಿಸಿದ್ದಾರೆ.

ಇದನ್ನೂ ಓದಿ: coal mine fire: ಕಲ್ಲಿದ್ದಲು ಗಣಿಯಲ್ಲಿ 52 ಜನ ಸಜೀವ ದಹನ!

ಆದರೆ, ವಂಚಕರು ಹೇಳಿದಂತೆ ಬೋನಸ್ ನೀಡದಿರುವುದರಿಂದ ಮತ್ತು ಪಾವತಿಸಿದ ಹಣವನ್ನು ಸಹ ವಾಪಸ್​ ನೀಡದಿರುವುದರಿಂದ ವಂಚನೆಗೊಳಗಾದ ವ್ಯಕ್ತಿ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮತಾಂತರ ಮಾಡುವವರಿಗೆ ಪ್ರಮೋದ್‌ ಮುತಾಲಿಕ್ ಎಚ್ಚರಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.