ETV Bharat / city

ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು: ಯುವಕನ ಬರ್ಬರ ಕೊಲೆ

author img

By

Published : Nov 26, 2020, 10:39 AM IST

ಬೊಕ್ಕಪಟ್ಣದ ಕರ್ನಲ್ ಗಾರ್ಡನ್ ಬಳಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Murder of young man in Mangalore
ಬೊಕ್ಕಪಟ್ಣದ ಕರ್ನಲ್ ಗಾರ್ಡನ್ ಬಳಿ ಯುವಕನ ಹತ್ಯೆ

ಮಂಗಳೂರು: ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೊಕ್ಕಪಟ್ಣದಲ್ಲಿ ನಡೆದಿದೆ.

ಬೊಕ್ಕಪಟ್ಣದ ಕರ್ನಲ್ ಗಾರ್ಡನ್ ಬಳಿ ಯುವಕನ ಹತ್ಯೆ

ಬೊಕ್ಕಪಟ್ಣ ನಿವಾಸಿ ಇಂದ್ರಜಿತ್ (45) ಕೊಲೆ ವ್ಯಕ್ತಿ. ಈತನನ್ನು ಬೊಕ್ಕಪಟ್ಣದ ಕರ್ನಲ್ ಗಾರ್ಡನ್ ಬಳಿ ಕೊಚ್ಚಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದ್ದು, ನಿನ್ನೆ ರಾತ್ರಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಪಕ್ಕದ ಮನೆಯವರ ಜಗಳ ಬಿಡಿಸಲು ಹೋಗಿ ತಾನೇ ಪರಲೋಕ ಸೇರಿದ ಮಹಿಳೆ!

ಈ ಸಂಬಂಧ ಬರ್ಕೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.