ETV Bharat / city

‘ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್’: ಸಂಚಾರಿ ವಾಹನಕ್ಕೆ ಇಂದು ಚಾಲನೆ

author img

By

Published : Jan 5, 2022, 7:26 AM IST

Updated : Jan 5, 2022, 7:36 AM IST

ರೋಟರಿ ಕ್ಲಬ್ ಮಂಗಳೂರು ವತಿಯಿಂದ ‘ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್’ ಎಂಬ ಕ್ಯಾನ್ಸರ್ ಪತ್ತೆ ಮಾಡುವ ಮೊಬೈಲ್ ಬಸ್ ವಾಹನ ಸೇವೆ ಆರಂಭಿಸಿದೆ.

Mobile clinic bus
ಮೊಬೈಲ್ ಬಸ್

ಮಂಗಳೂರು: ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್, ಸೆರ್ವಿಕಲ್ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮಹಾರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ಉದ್ದೇಶದಿಂದ ರೋಟರಿ ಕ್ಲಬ್ 1.25 ಕೋಟಿ ರೂ. ವೆಚ್ಚದ ಮೊಬೈಲ್ ಬಸ್​ವೊಂದನ್ನು ಕೊಡುಗೆಯಾಗಿ ನೀಡಿದ್ದು, ಇಂದು ಈ ಮೊಬೈಲ್ ಬಸ್​ಗೆ ಚಾಲನೆ ದೊರೆಯಲಿದೆ.

ರೋಟರಿ ಕ್ಲಬ್ ಮಂಗಳೂರು, ರೋಟರಿ ಕ್ಲಬ್ ಸಿಕಿಕಾನ್ ವ್ಯಾಲಿ (ಅಮೆರಿಕ), ರೋಟರಿ ಡಿಸ್ಟ್ರಿಕ್ಟ್ 6540 (ಅಮೆರಿಕ) ಹಾಗೂ ರೋಟರಿ ಡಿಸ್ಟ್ರಿಕ್ಟ್ (3181) ಈ ಕೊಡುಗೆಯನ್ನು ನೀಡಿದೆ. 'ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್' ಎಂಬ ಸ್ಲೋಗನ್ ಅಡಿ ಈ ಬಸ್ ಕಾರ್ಯ ನಿರ್ವಹಿಸಲಿದೆ. 'ಮಹಿಳಾ ಆರೋಗ್ಯ ಸಂಚಾರಿ ಚಿಕಿತ್ಸಾ ಘಟಕ' ಎಂಬ ಈ ಬಸ್ ಅನ್ನು ನಗರದ ಪ್ರತಿಷ್ಠಿತ ಯೆನೆಪೊಯ ಆಸ್ಪತ್ರೆ ನಿರ್ವಹಿಸಲಿದೆ.

ಮೊಬೈಲ್ ಬಸ್,Mobile clinic bus
ಮೊಬೈಲ್ ಬಸ್

ಮೊಬೈಲ್ ಕ್ಲಿನಿಕ್ ಬಸ್​ ಸ್ತನ ಕ್ಯಾನ್ಸರ್ ಪತ್ತೆಗಾಗಿ ಮ್ಯಾಮೊಗ್ರಾಫಿ ಮಷಿನ್, ಸೆರ್ವಿಕಲ್ ಕ್ಯಾನ್ಸರ್ ಪತ್ತೆಗಾಗಿ ಕೊಲ್ಪೊಸ್ಕೋಪಿ ಮಷಿನ್ ಮುಂತಾದ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಕ ಘಟಕಗಳನ್ನು ಹೊಂದಿದೆ. ಜೊತೆಗೆ ಹೈಟೆಕ್ ಟಾಯ್ಲೆಟ್ ವ್ಯವಸ್ಥೆ ಕೂಡಾ ಒಳಗೊಂಡಿದೆ. ಅಲ್ಲದೇ ಮಹಿಳಾ ನುರಿತ ವೈದ್ಯರು ಹಾಗೂ ದಾದಿಯರನ್ನು ಒಳಗೊಂಡಿದೆ.

ಈ ಮೊಬೈಲ್ ಬಸ್ ಅನ್ನು ದ.ಕ.ಜಿಲ್ಲೆಗೆ ಕೊಡುಗೆಯಾಗಿ ನೀಡಲಾಗಿದೆ. ಜಿಲ್ಲೆಯ ಹಳ್ಳಿ ಹಳ್ಳಿಗೂ ತೆರಳುವ ಈ ಬಸ್, ಮಹಿಳೆಯರಿಗೆ ಮಾಡುವ ಎಲ್ಲ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ಉಚಿತವಾಗಿ ನೀಡುತ್ತದೆ. ಬೆಂಗಳೂರಿನಲ್ಲಿ ಈ ರೀತಿಯ ಹೈಟೆಕ್ ಮೊಬೈಲ್ ಬಸ್ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮಂಗಳೂರಿನಲ್ಲಿ ಸಹ ಕಾರ್ಯಾಚರಿಸಲಿದೆ. ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರನ್ನು ಗುರಿಯಾಗಿಸಿಕೊಂಡು ಈ ಮೊಬೈಲ್ ಬಸ್ ಸೇವೆ ನೀಡಲಾಗಿದೆ.

ಮೊಬೈಲ್ ಕ್ಲಿನಿಕ್ ಸಂಚಾರಿ ವಾಹನಕ್ಕೆ ಇಂದು ಚಾಲನೆ

ಕೆಲವೊಂದು ಮಹಿಳೆಯರು ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಈ ರೀತಿಯಲ್ಲಿ ಮಹಿಳೆಯರ ಮನವೊಲಿಕೆ ಮಾಡಿ, ಅವರನ್ನು ಕೌನ್ಸಲಿಂಗ್​ಗೆ ಒಳಪಡಿಸಲಾಗುತ್ತದೆ. ಬಳಿಕ ಯಾರಿಗೆ ತಪಾಸಣೆ ಅಗತ್ಯವಿದೆಯೋ ಅವರಿಗೆ ರಿಜಿಸ್ಟ್ರೇಷನ್ ಮಾಡಿಕೊಂಡು, ಮೊಬೈಲ್ ಬಸ್ ಮೂಲಕ ಉಚಿತವಾಗಿ ತಪಾಸಣೆ ಮಾಡಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರಿಗೆ ಯೆನೆಪೊಯ ಆಸ್ಪತ್ರೆಯ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಸಲಾಗುತ್ತದೆ.

Last Updated :Jan 5, 2022, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.