ETV Bharat / city

ಗುದನಾಳದಲ್ಲಿಟ್ಟು ಅಕ್ರಮ ಚಿನ್ನ ಸಾಗಾಟ: 58.95 ಲಕ್ಷ ರೂ ಮೌಲ್ಯದ ಚಿನ್ನ ವಶ

author img

By

Published : Feb 17, 2020, 7:23 PM IST

ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಪ್ರಕರಣಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದ್ದು, ರೂ 58.95 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿ, ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

mangalore-custom-officer-arrest-two-thief
ಮಂಗಳೂರು ಕಸ್ಟಮ್ ಅಧಿಕಾರಿಗಳು

ಮಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ರೂ 58.95 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಮಂಗಳೂರು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ.

ಮೊದಲನೆ ಪ್ರಕರಣದಲ್ಲಿ ದುಬೈ ನಿಂದ ಮಂಗಳೂರಿಗೆ ಬಂದ ಸ್ಪೈಷ್ ಜೆಟ್ ವಿಮಾನದಲ್ಲಿ ಕೇರಳದ ಮಲ್ಲಪುರಂನ ಮುಹಮ್ಮದ್ ಸ್ವಲಿಹ್ ಚಪ್ಪತೊಡಿ ಎಂಬಾತನಿಂದ ರೂ 32, 35, 820 ಮೌಲ್ಯದ 797 ಗ್ರಾಂ 24 ಕ್ಯಾರೆಟ್ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಪ್ರಕರಣದಲ್ಲಿ ಮುಹಮ್ಮದ್ ನಿಶಾದ್ ಚೆರುವನಸ್ಸೆರಿ (25) ಎಂಬಾತನಿಂದ ರೂ 26.59 ಲಕ್ಷ ರೂ ಮೌಲ್ಯದ 655 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ಪ್ರಕರಣದಲ್ಲಿ ಆರೋಪಿಗಳು ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದ ಕ್ಯಾಪ್ಸೂಲ್ ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ತಂದಿದ್ದರು. ಕಸ್ಟಮ್ಸ್ ಅಧಿಕಾರಿಗಳಾದ ಶ್ರೀಲಕ್ಷ್ಮೀ, ಗೋಪಿನಾಥ್, ಸವಿತಾ ಕೋಟ್ಯಾನ್, ರಾಮವ್ತಾರ್ ಮೀನ ಮತ್ತು ಇನ್ಸ್ ಪೆಕ್ಟರ್ ಸಮಲ ಮೋಹನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.