ETV Bharat / city

ಬಂಟ್ವಾಳ: ಮನೆ ಮೇಲೆ ಕುಸಿದ ಗುಡ್ಡದ ಮಣ್ಣು, ಕೇರಳದ ಮೂವರು ಕಾರ್ಮಿಕರು ಸಾವು

author img

By

Published : Jul 7, 2022, 8:24 AM IST

Updated : Jul 7, 2022, 10:12 AM IST

ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಮನೆಯೊಂದರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

man died over landslide in Mangalore, worker stuck in Bantwal landslide, Bantwal landslide news, Bantwal landslide rescue operation, ಮಂಗಳೂರಿನಲ್ಲಿ ಭೂಕುಸಿತದಿಂದ ವ್ಯಕ್ತಿ ಸಾವು, ಬಂಟ್ವಾಳ ಭೂಕುಸಿತದಲ್ಲಿ ಸಿಲುಕಿದ ಕಾರ್ಮಿಕರು, ಬಂಟ್ವಾಳ ಭೂಕುಸಿತ ಸುದ್ದಿ, ಬಂಟ್ವಾಳ ಭೂಕುಸಿತ ರಕ್ಷಣಾ ಕಾರ್ಯಾಚರಣೆ,
ಬಂಟ್ವಾಳ ಸಮೀಪ ಭೂಕುಸಿತ

ಬಂಟ್ವಾಳ(ದಕ್ಷಿಣ ಕನ್ನಡ): ನಿರಂತರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೇಲ್ಯಪಲ್ಕೆ ಪಕ್ಕದ ಮುಕ್ಕುಡ ಬಳಿ ಕಳೆದ ರಾತ್ರಿ ಭೂಕುಸಿತ ಉಂಟಾಗಿದೆ. ಮನೆಯೊಂದರ ಮೇಲೆ ಗುಡ್ಡದ ಮಣ್ಣು ಜರಿದು ಕೇರಳ ಮೂಲದ ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಕೊಟ್ಟಾಯಂನ ಬಾಬು, ಪಾಲಕ್ಕಾಡು ನಿವಾಸಿ ಬಿಜು (46), ಅಲಪ್ಪುಳದ ಸಂತೋಷ್ (46) ಸಾವಿಗೀಡಾದ ಕಾರ್ಮಿಕರು. ಕಣ್ಣೂರಿನ ಜಾನಿ ಬದುಕುಳಿದಿದ್ದು ಚಿಕಿತ್ಸೆ ನಡೆಯುತ್ತಿದೆ.


ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಸ್ತೆ ಮೇಲೆ ಮಣ್ಣು ಕುಸಿತ.. ಧರೆಗುರುಳುತ್ತಿವೆ ಮರಗಳು

ಘಟನೆ ನಡೆದ ಕೂಡಲೇ ಸ್ಥಳೀಯರು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುದ್ದಿ ಮುಟ್ಟಿಸಿದ್ದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 9.30ರ ವೇಳೆಗೆ ಮೂವರು ಗಾಯಾಳು ಕಾರ್ಮಿಕರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಪಡಿಸಿತ್ತು.

Last Updated : Jul 7, 2022, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.