ETV Bharat / city

ಗುದದ್ವಾರದಲ್ಲಿಟ್ಟುಕೊಂಡು ಚಿನ್ನ ಸಾಗಣೆ... ಮಂಗಳೂರು ಏರ್​ಪೋರ್ಟ್​ನಲ್ಲಿ ಮೂವರು ಅರೆಸ್ಟ್​

author img

By

Published : Apr 24, 2019, 10:12 AM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವರು ಅರೆಸ್ಟ್​- ಗುದದ್ವಾರದಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಮೂವರು ಅಂದರ್​ - ಮೂರು ಪ್ರಕರಣದಲ್ಲಿ 49.50 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

-ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಕಸ್ಟಮ್ಸ್​​ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಗುದದ್ವಾರದಲ್ಲಿಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.

ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮಂಗಳೂರು ಕಸ್ಟಮ್ಸ್​​ ಅಧಿಕಾರಿಗಳು, ಒಟ್ಟು 49.40 ಲಕ್ಷ ಮೌಲ್ಯದ 1550 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ

ಎಪ್ರಿಲ್ 16 ರಂದು ದುಬೈ ವಿಮಾನದಲ್ಲಿ ಬಂದ ಪ್ರಯಾಣಿಕ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ 24 ಕ್ಯಾರೆಟ್ ಶುದ್ದ 392.260 ಗ್ರಾಂ ಚಿನ್ನದ ಪೇಸ್ಟ್ ಮತ್ತು ಬ್ಯಾಗ್​ನಲ್ಲಿದ್ದ 52.350 ಗ್ರಾಂ ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಚಿನ್ನದ ಮೌಲ್ಯ 14.09 ಲಕ್ಷ ಎಂದು ಅಂದಾಜಿಸಲಾಗಿದೆ.

ಎಪ್ರಿಲ್ 21 ರಂದು ದೋಹದಿಂದ ಬಂದ ಇಬ್ಬರು ಪ್ರಯಾಣಿಕರಿಂದ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ 24/18 ಕ್ಯಾರೆಟ್ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ. ಓರ್ವ ಪ್ರಯಾಣಿಕನಿಂದ ರೂ 14.81 ಲಕ್ಷ ರೂ. ಮೌಲ್ಯದ 462.970 ಗ್ರಾಂ ಚಿನ್ನ ಮತ್ತೋರ್ವ ಪ್ರಯಾಣಿಕನಿಂದ 20.51 ಲಕ್ಷ ರೂ. ಮೌಲ್ಯದ 641 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Intro:ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ‌ನಿಲ್ದಾಣದಲ್ಲಿ ಗುದದ್ವಾರದಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ‌ ಮೂರು ಪ್ರಕರಣವನ್ನು ಪತ್ತೆ ಹಚ್ಚಿದ್ದ ಮಂಗಳೂರು ಕಸ್ಟಂ ಅಧಿಕಾರಿಗಳು ಒಟ್ಟು ರೂ 49.40 ಲಕ್ಷ ಮೌಲ್ಯದ 1550 ಗ್ರಾಂ ಚಿನ್ನ‌ವಶಪಡಿಸಿ ಮೂವರನ್ನು ಬಂಧಿಸಿದ್ದಾರೆ.




Body:ಈ ಘಟನೆ ಎಪ್ರಿಲ್ 16 ಮತ್ತು 21 ರಂದು ನಡೆದಿದೆ. ಎಪ್ರಿಲ್ 16 ರಂದು ದುಬಾಯಿ ವಿಮಾನದಲ್ಲಿ ಬಂದ ಪ್ರಯಾಣಿಕನಿಂದ ಆತನ ಗುದದ್ವಾರದಲ್ಲಿ ಅಡಗಿಸಿಟ್ಟ 24 ಕ್ಯಾರೆಟ್ ಶುದ್ದ 392.260 ಗ್ರಾಂ ಚಿನ್ನದ ಪೇಸ್ಟ್ ಮತ್ತು ಬ್ಯಾಗ್ ನಲ್ಲಿದ್ದ52.350 ಗ್ರಾಂ ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಯಿತು. ಈ ಚಿನ್ನದ ಮೌಲ್ಯ 14.09 ಎಂದು ಅಂದಾಜಿಸಲಾಗಿದೆ.
ಎಪ್ರಿಲ್ 21 ರಂದು ದೋಹದಿಂದ ಬಂದ ಇಬ್ಬರು ಪ್ರಯಾಣಿಕರಿಂದ ಗುದದ್ವಾರದಲ್ಲಿ ಅಡಗಿಸಿಟ್ಟ 24/18 ಕ್ಯಾರೆಟ್ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ. ಓರ್ವ ಪ್ರಯಾಣಿಕನಿಂದ ರೂ 14.81 ಲಕ್ಷ ರೂ ಮೌಲ್ಯದ 462.970 ಗ್ರಾಂ ಚಿನ್ನ ಮತ್ತೋರ್ವ ಪ್ರಯಾಣಿಕನಿಂದ 20.51 ಲಕ್ಷ ರೂ ಮೌಲ್ಯದ 641 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.