ETV Bharat / city

ವಿಟ್ಲ ಪೊಲೀಸ್ ಕಾನ್ಸ್​ಟೆಬಲ್​ಗೆ ಕೋವಿಡ್-19 ಸೋಂಕು ದೃಢ

author img

By

Published : May 24, 2020, 4:10 PM IST

Updated : May 24, 2020, 8:22 PM IST

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ಕಾನ್ಸ್ ಟೆಬಲ್ ವೊಬ್ಬರಿಗೆ ಕೋವಿಡ್-19 ಸೋಂಕು ದೃಢಗೊಂಡಿದ್ದು, ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ‌.

covid-19 infection confirmed to police constable
ದ.ಕ.ಜಿಲ್ಲೆಯ ಓರ್ವ ಪೊಲೀಸ್ ಕಾನ್ಸ್ ಟೆಬಲ್ ಗೆ ಕೋವಿಡ್-19 ಸೋಂಕು ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಓರ್ವ ಪೊಲೀಸ್ ಕಾನ್ಸ್​ಟೆಬಲ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಪೊಲೀಸರಿಗೆ ಗಂಟಲು ದ್ರವ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಸೋಂಕು ಪತ್ತೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದು, ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಸಂಪರ್ಕದಿಂದ ಅವರಿಗೆ ಸೋಂಕು ತಗುಲಿದೆ‌.

covid-19-infection-confirmed-to-police-constable
ದ.ಕ.ಜಿಲ್ಲೆಯ ಪೊಲೀಸ್ ಕಾನ್ಸ್ ಟೆಬಲ್ ಗೆ ಕೋವಿಡ್-19 ಸೋಂಕು ದೃಢ

ಮೇ14ರಂದು ಮಹಾರಾಷ್ಟ್ರದ ರಾಯಗಢದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ಗೆ ಹೋಗುವ ಮುನ್ನ ಪೊಲೀಸ್ ಠಾಣೆಗೆ ಹೋಗಿದ್ದ ಸಂದರ್ಭ ಸೋಂಕು ತಗುಲಿದೆ. ಪೊಲೀಸರ ಗಂಟಲು ದ್ರವ ಪರೀಕ್ಷೆಯ ವರದಿ ಇಂದು ಬಂದಿದ್ದು, ಇದರಲ್ಲಿ ಓರ್ವ ಕಾನ್ಸ್​ಟೆಬಲ್ ಗೆ ಕೋವಿಡ್-19 ಸೋಂಕು ಖಚಿತವಾಗಿದೆ.

ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೆಬಲ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ವಿಟ್ಲ ಠಾಣಾಧಿಕಾರಿ ಸೇರಿದಂತೆ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿರುವ ಕಾರಣ, ಬಂಟ್ವಾಳ ಸಂಚಾರಿ ಠಾಣಾ ಎಸ್.ಐ. ರಾಜೇಶ್ ಅವರಿಗೆ ವಿಟ್ಲ ಠಾಣೆಯ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. ಈ ಮಧ್ಯೆ ಪೊಲೀಸ್ ಸಿಬ್ಬಂದಿಗೆ ಕೊರೊನಾ ಬಂದ ರೀತಿಯೇ ಕುತೂಹಲಕ್ಕೆ ಕಾರಣವಾಗಿದೆ.

ವಿಟ್ಲ ಠಾಣೆಯನ್ನು ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ. ಇದಾಗಿ ಸುಮಾರು 48 ಗಂಟೆಗಳ ಅವಧಿಯಲ್ಲಿ ಪೊಲೀಸ್ ಠಾಣೆಯನ್ನು ಬಳಸುವಂತಿಲ್ಲ. ಆಮೇಲೆ ಆಡಳಿತದ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಒಟ್ಟು 32 ಮಂದಿ ಸಿಬ್ಬಂದಿ ಇರುವ ವಿಟ್ಲ ಠಾಣೆಯಲ್ಲಿ ಈಗಾಗಲೇ 12 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಅವರ ಪೈಕಿ ಒಬ್ಬರಿಗೆ ಪಾಸಿಟಿವ್ ಬಂದಿದೆ. ಅವರ ಪ್ರಾಥಮಿಕ ಸಂಪರ್ಕದ 13 ಮಂದಿಯನ್ನು ವಿಟ್ಲ ಸಿಪಿಸಿಆರ್ ಐನಲ್ಲಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಬಂಟ್ವಾಳ ಸರ್ಕಲ್ ಇನ್ಸ್​​ಪೆಕ್ಟರ್ ಸಿ.ಡಿ. ನಾಗರಾಜ್ ತಿಳಿಸಿದ್ದಾರೆ.

ಮೇ15ಕ್ಕೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ದೇರಳಕಟ್ಟೆಗೆ ಬಂದಿದ್ದು, ಅಲ್ಲಿಂದ ರಾತ್ರಿ ವಿಟ್ಲ ಪೊಲೀಸ್ ಠಾಣೆಗೆ ಬೆಳಗಿನ ಜಾವ ಬಂದಿದ್ದಾರೆ. ಆ ಸಂದರ್ಭ ಅವರು ಕ್ವಾರಂಟೈನ್ ಗೆ ಒಳಪಡಬೇಕಾದ ಹಾಸ್ಟೆಲ್ ಗೆ ಸಂಬಂಧಿಸಿದವರಿಗೆ ದೂರವಾಣಿ ಕರೆ ಮಾಡಿದ್ದು, ಅವರು ಸ್ವೀಕರಿಸಲಿಲ್ಲ ಎಂದು ವಿಟ್ಲ ಸ್ಟೇಶನ್ ಗೆ ಬಂದಿದ್ದಾರೆ. ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್ ಟೆಬಲ್ ಮತ್ತು ಹೆಡ್ ಕಾನ್ಸ್​​ಟೆಬಲ್ ಅವರ ಬಳಿ ಮಾತನಾಡಿದ ಮಹಾರಾಷ್ಟ್ರದಿಂದ ಬಂದ ವ್ಯಕ್ತಿ, ದಾಖಲೆ ನೀಡಿದ್ದಾರೆ. ಬಳಿಕ ಕೂಡಲೇ ಅವರನ್ನು ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗುತ್ತದೆ. ಮೇ 18ಕ್ಕೆ ಮಹಾರಾಷ್ಟ್ರದ ವ್ಯಕ್ತಿಗೆ ಸೋಂಕು ಇರುವುದು ದೃಢಪಡುತ್ತದೆ. ಈ ವೇಳೆ ಸಂಪರ್ಕಿತ ವಿಟ್ಲ ಠಾಣಾ ಪೊಲೀಸರೂ ಸ್ವಯಂ ಕ್ವಾರಂಟೈನ್ ಗೆ ಒಳಪಡುತ್ತಾರೆ ಹಾಗೂ ಅವರ ಸಂಪರ್ಕದ 12 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ.

ವಿಶೇಷವೆಂದರೆ, ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ನೇರ ಸಂಪರ್ಕ ಹೊಂದಿದ ಪೊಲೀಸ್ ಕಾನ್ಸ್​ಟೆಬಲ್ ವರದಿ ನೆಗೆಟಿವ್ ಬಂದಿದೆ. ಆದರೆ ಅವರ ಕೈಯಿಂದ ಮೊಬೈಲ್ ಪಡೆದು ಮಾತನಾಡಿದ ಪೊಲೀಸ್ ಠಾಣೆಯ 42 ವರ್ಷದ ಹೆಡ್ ಕಾನ್ಸ್​​ಟೆಬಲ್ ಅವರಲ್ಲಿ ಸೋಂಕು ಪತ್ತೆಯಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್ ನಿಂದ ಹೆಡ್ ಕಾನ್ಸ್​​ಟೆಬಲ್ ಗೆ ಸೋಂಕು ಹರಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Last Updated : May 24, 2020, 8:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.