ETV Bharat / city

'ಡಿಸಿಸಿ ಬ್ಯಾಂಕ್​ಗಳು ಶೀಘ್ರ ಎಲ್ಲಾ ರೈತರಿಗೆ ಸಾಲ ಕೊಡುವ ಗುರಿ ಮುಟ್ಟಲಿವೆ'

author img

By

Published : Jul 3, 2020, 4:28 PM IST

ಮಂಗಳೂರು ಹಾಗೂ ಉಡುಪಿಯ ಡಿಸಿಸಿ ಬ್ಯಾಂಕ್​ಗಳು ಸುಮಾರು 26 ಸಾವಿರ ರೈತರಿಗೆ ಸಾಲ ಕೊಡಲು ನಿರ್ಧರಿಸಿವೆ. ಇದರಲ್ಲಿ 19,617 ರೈತರಿಗೆ ಈಗಾಗಲೇ 396 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದ್ದಾರೆ.

Cooperative Minister ST Somashekhar statement
ಡಿಸಿಸಿ ಬ್ಯಾಂಕ್​ಗಳು ಶೀಘ್ರದಲ್ಲೇ ಎಲ್ಲಾ ರೈತರಿಗೆ ಸಾಲ ಕೊಡುವ ಗುರಿ ಮುಟ್ಟಲಿವೆ: ಸಚಿವ ಎಸ್.ಟಿ.ಸೋಮಶೇಖರ್

ಮಂಗಳೂರು (ದಕ್ಷಿಣಕನ್ನಡ): ಮಂಗಳೂರು ಹಾಗೂ ಉಡುಪಿಯ ಡಿಸಿಸಿ ಬ್ಯಾಂಕ್​ಗಳು ಸುಮಾರು 26 ಸಾವಿರ ರೈತರಿಗೆ ಸಾಲ ಕೊಡಲು ನಿರ್ಧರಿಸಿವೆ ಎಂದು ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್​ಗಳು ಶೀಘ್ರದಲ್ಲೇ ಎಲ್ಲಾ ರೈತರಿಗೆ ಸಾಲ ಕೊಡುವ ಗುರಿ ಮುಟ್ಟಲಿವೆ: ಸಚಿವ ಎಸ್.ಟಿ.ಸೋಮಶೇಖರ್

ಇದರಲ್ಲಿ 19,617 ರೈತರಿಗೆ ಈಗಾಗಲೇ 396 ಕೋಟಿ ರೂ. ಸಾಲ ಕೊಡಲಾಗಿದೆ. ಕೆಲವೇ ಸಮಯದಲ್ಲಿ ಇನ್ನುಳಿದ ರೈತರಿಗೂ ಸಾಲ ನೀಡುವ ಮೂಲಕ ಗುರಿ ಮುಟ್ಟುವ ಯೋಜನೆ ಕೈಗೊಂಡಿದ್ದಾರೆ. ಅದೇ ರೀತಿ ಜಿಲ್ಲೆಯ 21 ಡಿಸಿಸಿ ಬ್ಯಾಂಕ್​ಗಳಿಗೂ ಆದಷ್ಟು ಬೇಗ ರೈತರಿಗೆ ಸಾಲ ಕೊಡುವ ಗುರಿಯನ್ನ ಹೊಂದುವ ಬಗ್ಗೆ ಮನವಿ ಮಾಡಲಾಗಿದೆ ಎಂದರು.

ಜುಲೈ 10ರ ಬಳಿಕ ಎಲ್ಲಾ ಡಿಸಿಸಿ ಬ್ಯಾಂಕ್​ಗಳ ಎಂಡಿ ಹಾಗೂ ಅಧ್ಯಕ್ಷರ ಸಭೆ ನಡೆಸಿ, ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.