ETV Bharat / city

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್​ನವರು ಬಿಜೆಪಿ ಬೆಂಬಲಿಸಿದ್ದಾರೆ: ಸಿ.ಟಿ.ರವಿ

author img

By

Published : Jun 12, 2022, 10:03 AM IST

Updated : Jun 12, 2022, 12:30 PM IST

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್​ನವರು ನಮಗೆ ಬೆಂಬಲ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸಿ.ಟಿ.ರವಿ
ಸಿ.ಟಿ.ರವಿ

ಬಂಟ್ವಾಳ: ಉತ್ತರ ಪ್ರದೇಶದಲ್ಲಿ ಗಲಭೆಕೋರರು, ಅಶಾಂತಿ ಸೃಷ್ಟಿಸುವವರನ್ನು ಮಟ್ಟ ಹಾಕಲು ಯೋಗಿ ಆದಿತ್ಯನಾಥ್ ಆರಂಭಿಸಿರುವ 'ಬುಲ್ಡೋಜರ್ ಮಾದರಿ' ಕಾರ್ಯಾಚರಣೆಯನ್ನು ಕರ್ನಾಟಕದಲ್ಲೂ ತರಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿಯ ಬಂಟ್ವಾಳ ಮಹಿಳಾ ಮೋರ್ಚಾ ವತಿಯಿಂದ ನಾರಿ ಸಮ್ಮಾನ್ ದೇಶದ ಅಭಿಯಾನದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಜಾತಿ, ಧರ್ಮ ತಾರತಮ್ಯ ಮಾಡದೆ ತಂದ ಯೋಜನೆಗಳ ಫಲಾನುಭವಿಗಳು ಎಲ್ಲ ಧರ್ಮ, ಜಾತಿಯವರೂ ಇದ್ದಾರೆ. ಸವಲತ್ತು ಪಡೆಯುವಾಗ ನೆನಪಾಗದೆ, ಕೇವಲ ಮೋದಿ ಅವರನ್ನು ದ್ವೇಷ ಮಾಡುತ್ತಾ, ಬಿಜೆಪಿಯನ್ನು ಕೋಮುವಾದಿಗಳು ಎಂದು ಜರೆಯುತ್ತಿರುವುದು ಸರಿಯಲ್ಲ. ಇವೆಲ್ಲವನ್ನೂ ಲೆಕ್ಕಿಸದೆ ಬಿಜೆಪಿ ಮುನ್ನಡೆಯುತ್ತಿದ್ದು, ವಿಶ್ವಮಾನ್ಯರಾಗಿ ನರೇಂದ್ರ ಮೋದಿ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ ಎಂದರು.

ಸಿ.ಟಿ.ರವಿ ಪ್ರತಿಕ್ರಿಯೆ

ಬಿಜೆಪಿಯಲ್ಲಿ ಭಾರತ್ ಮಾತಾ ಕೀ ಜೈ ಎಂದರೆ, ಇತರ ಪಕ್ಷಗಳಲ್ಲಿ ವ್ಯಕ್ತಿಗೆ ಜೈ ಎನ್ನಲಾಗುತ್ತದೆ. ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್, ಎನ್​ಸಿಪಿ, ಜೆಡಿಎಸ್, ಟಿಎಂಸಿ ಸಹಿತ ರಾಜಕೀಯ ಪಕ್ಷಗಳು ಬಿಜೆಪಿ ಮೇಲೆ ವಿನಾ ಕಾರಣ ಕೋಮುವಾದದ ಆರೋಪ ಮಾಡುತ್ತಿವೆ. ಬಿಜೆಪಿ ನೈಜ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದೆ ಎಂದರು. ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.

ಕಾಂಗ್ರೆಸ್​, ಜೆಡಿಎಸ್​ನಿಂದ ಬೆಂಬಲ: ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿ.ಟಿ.ರವಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್​​ನವರು ನಮ್ಮನ್ನು ಬೆಂಬಲಿಸಿದ್ದಾರೆ. ರಾಮಾಯಣ ಯುದ್ಧದ ಕಾಲದಲ್ಲಿ ರಾವಣನ ತಮ್ಮ ವಿಭೀಷಣ ರಾಮನ ಕಡೆಗೆ ಬಂದಿದ್ದ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಜ್ಯಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದರು.

ರಾಜ್ಯಸಭೆ ಚುನಾವಣೆಯ ಮತದಾನದ ವೇಳೆ ನಮಗೆ ಕಾಂಗ್ರೆಸ್​, ಜೆಡಿಎಸ್​ನವರೂ ಬೆಂಬಲ ಕೊಟ್ಟಿದ್ದಾರೆ. ಎ ಟೀಮ್, ಬಿ ಟೀಮ್ ಎಂದೇನಿಲ್ಲ. ನಮ್ಮ ನಾಯಕರ ಕಾರ್ಯವೈಖರಿಯನ್ನು ನೋಡಿ ಬೆಂಬಲಿಸುವವರು ಇದ್ದಾರೆ. ಚುನಾವಣೆಯಲ್ಲಿ ಬೆಂಬಲಿಸುವವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದರು.

ವಿಶ್ವನಾಥ್ ಪಠ್ಯಪುಸ್ತಕ ಓದಲಿ: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿದ ಬದಲಾವಣೆ ಕುರಿತು ಇತ್ತೀಚೆಗೆ ಟೀಕೆ ಮಾಡಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಮೊದಲು ಪಠ್ಯ ಪುಸ್ತಕ ಓದಲಿ ಎಂದು ಸಿ.ಟಿ.ರವಿ ತಿರುಗೇಟು ನೀಡಿದರು. ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವನಾಥ್ ಹೇಳಿಕೆಗೆ ಉತ್ತರ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಜ್ಯ ವಿಧಾನ ಪರಿಷತ್ ಚುನಾವಣೆ: 4 ಮತಕ್ಷೇತ್ರ ವ್ಯಾಪ್ತಿಗೆ ರಜೆ ಘೋಷಣೆ

Last Updated : Jun 12, 2022, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.