ETV Bharat / city

ತೆಂಗು ಬೆಳೆ ಮೌಲ್ಯವರ್ಧನೆಗೆ ವಿಶೇಷ ಪ್ರಯತ್ನ.. ದ.ಕ ಜಿಲ್ಲೆಯಲ್ಲಿ ತಯಾರಾಗುತ್ತಿದೆ 'ಬನ್ನಂಗಾಯಿ' ಪಿಕಲ್​​

author img

By

Published : Jul 18, 2022, 1:23 PM IST

'ಬನ್ನಂಗಾಯಿ' ಎಂದರೆ ಬಲಿತ ಸೀಯಾಳ. ಅಡುಗೆಗೆ ಉಪಯೋಗಿಸುವ ತೆಂಗಿನ ಕಾಯಿಗಿಂತ ಮೊದಲು ಸಿಗುವಂತಹದು. ಇದರ ಮೂಲಕ ಉಪ್ಪಿನಕಾಯಿ ತಯಾರಿಸುವುದು ಮೊದಲ ಪ್ರಯತ್ನವಾಗಿದೆ.

Coconut Pickle prepared in Dakshina Kannada
ಬನ್ನಂಗಾಯಿ ಉಪ್ಪಿನಕಾಯಿ

ಮಂಗಳೂರು: ಉಪ್ಪಿನಕಾಯಿ ಎಲ್ಲರಿಗೂ ಅಚ್ಚುಮೆಚ್ಚಿನ ಪದಾರ್ಥ. ನಿಂಬೆಕಾಯಿ, ಮಾವಿನ ಕಾಯಿ, ಟೊಮೆಟೊ, ಮಿಶ್ರ ತರಕಾರಿಗಳ​ ಉಪ್ಪಿನಕಾಯಿ​​ ಬಗ್ಗೆ ಕೇಳಿದ್ದೀರಿ ಮತ್ತು ತಿಂದಿದ್ದೀರಿ. ಆದ್ರೆ ಬಳಿಕ ಬೇರೆ ಬೇರೆ ತರಕಾರಿಗಳಿಂದ ಉಪ್ಪಿನಕಾಯಿ ತಯಾರಿ ಪ್ರಯೋಗ ನಡೆದಿದೆ. ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಬನ್ನಂಗಾಯಿ'(ಬಲಿತ ಸೀಯಾಳ) ಉಪ್ಪಿನಕಾಯಿ ಉದ್ಯಮ ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬನ್ನಂಗಾಯಿ ಉಪ್ಪಿನಕಾಯಿ ಉದ್ಯಮ ಆರಂಭ

ಬನ್ನಂಗಾಯಿ ಮೂಲಕ ಉಪ್ಪಿನಕಾಯಿ ತಯಾರಿಸುವುದು ಮೊದಲ ಪ್ರಯತ್ನವಾಗಿದೆ. ಈ ಒಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿರುವುದು ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿ. ತೆಂಗು ಬೆಳೆಗಾರರನ್ನು ಒಂದೆಡೆ ಸೇರಿಸಿ ಆರಂಭಿಸಲಾದ ಈ ಸಂಸ್ಥೆ ತೆಂಗು ಬೆಳೆಯ ಮೌಲ್ಯವರ್ಧನೆ ಹೆಚ್ಚಿಸುವುದು ಮತ್ತು ಅದರ ಭಾಗವಾಗಿ ಬನ್ನಂಗಾಯಿ ಉಪ್ಪಿನಕಾಯಿಯನ್ನು ತಯಾರಿಸಲಾಗುತ್ತಿದೆ.

Coconut Pickle prepared in Dakshina Kannada
ಬನ್ನಂಗಾಯಿ ಉಪ್ಪಿನಕಾಯಿ

ಸಂಸ್ಥೆಯು ಆಯ್ದ ತೆಂಗು ಬೆಳೆಗಾರರಿಂದ ಬಲಿತ ತೆಂಗಿನಕಾಯಿ ಖರೀದಿಸಿ ಬೆಂಗಳೂರಿನಲ್ಲಿ ಬನ್ನಂಗಾಯಿ ಉಪ್ಪಿನಕಾಯಿ ಮಾಡುತ್ತಿದೆ. ಬೆಳ್ಳುಳ್ಳಿ ಸಹಿತ ಮತ್ತು ಬೆಳ್ಳುಳ್ಳಿ ರಹಿತ ಎಂಬ ಎರಡು ಬಗೆಯಲ್ಲಿ ಉಪ್ಪಿನಕಾಯಿ ತಯಾರಿಸಲಾಗಿದೆ. ಉಪ್ಪಿನಕಾಯಿ ತಯಾರಿಸುವಾಗ ಯಾವೆಲ್ಲ ಮಾನದಂಡ ಅನುಸರಿಸಬೇಕು, ಯಾವುದನ್ನೆಲ್ಲ ಬಳಸಬೇಕು ಎಂಬುದನ್ನು ಅಧ್ಯಯನ ಮಾಡಿ ಉತ್ಪಾದಿಸಲಾಗುತ್ತದೆ. ಈ ಬನ್ನಂಗಾಯಿ ಉಪ್ಪಿನಕಾಯಿ ಆರು ತಿಂಗಳವರೆಗೆ ಬಳಸಲು ಸಾಧ್ಯ ಎಂಬುದನ್ನು ಕಂಡುಕೊಳ್ಳಲಾಗಿದೆ. 250 ಗ್ರಾಂನ ಪ್ಯಾಕೆಟ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಬನ್ನಂಗಾಯಿ ಉಪ್ಪಿನಕಾಯಿ ಹೊಸ ಪ್ರಯೋಗವಾಗಿದೆ. ತೆಂಗಿನಕಾಯಿಯಿಂದಲೂ ಉಪ್ಪಿನಕಾಯಿ ತಯಾರಿ ಅಚ್ಚರಿ ಮೂಡಿಸಿದೆ. ಬೇಗನೆ ಹಾಳಾಗುವ ತೆಂಗಿನ ಕಾಯಿಯಿಂದ ಬಹು ಸಮಯ ಉಳಿಯುವ ಉಪ್ಪಿನಕಾಯಿ ತಯಾರಿಸುವ ಮೂಲಕ ಈ ಸಂಸ್ಥೆ ವಿಶೇಷ ಪ್ರಯತ್ನ ಮಾಡಿದೆ. ಈ ಉಪ್ಪಿನಕಾಯಿ ಸವಿದವರು ಉತ್ತಮವಾಗಿದೆ ಎಂಬ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಬನ್ನಂಗಾಯಿ ಉಪ್ಪಿನಕಾಯಿ ತಯಾರಿಗೆ ಸಿದ್ಧತೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.