ETV Bharat / city

ಬಿಎಸ್​​ವೈರನ್ನ ಟಚ್ ಮಾಡಿದ್ರೆ ಕರ್ನಾಟಕಕ್ಕೆ ಬೆಂಕಿ ಬೀಳುತ್ತೆ: ಸಾರಂಗಧರ ಮಹಾಸ್ವಾಮಿ

author img

By

Published : Jun 16, 2021, 5:33 PM IST

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸುಲಫಲ ಮಠದ ಸಾರಂಗಧರ ಮಹಾಸ್ವಾಮಿ, ಬಿ.ಎಸ್​. ಯಡಿಯೂರಪ್ಪರನವರು 40 ವರ್ಷಗಳ ಸತತ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ಅವರನ್ನು ಟಚ್ ಮಾಡಿದರೆ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

sarangadhara-mahaswamy-
ಸಾರಂಗಧರ ಮಹಾಸ್ವಾಮಿ

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೊಂದು ಕಡೆ ರಾಜ್ಯದ ಮಠಾಧೀಶರು ದೊಡ್ಡ ಸಂಖ್ಯೆಯಲ್ಲಿ ಬಿಎಸ್​ವೈ ಬೆನ್ನಿಗೆ ನಿಂತಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಸುವಂತೆ ಸ್ವ-ಪಕ್ಷದಲ್ಲೇ ಅಪಸ್ವರ ಕೇಳಿಬರುತ್ತಿವೆ. ಬದಲಾವಣೆ ವಿಚಾರ ಹೈಕಮಾಂಡ್ ಅಂಗಳಕ್ಕೂ ತಲುಪಿದೆ.

ಈ ನಡುವೆ ರಾಜ್ಯದ ಕೆಲ‌ ಮಠಾಧೀಶರು ಯಡಿಯೂರಪ್ಪರನ್ನು ಟಚ್ ಮಾಡಿದರೆ ಪಾರ್ಲಿಮೆಂಟ್ ಎದುರಿಗೆ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸುತ್ತಿದ್ದಾರೆ. ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಕೂಡ ಬಿಎಸ್​ವೈ ಪರ ಬ್ಯಾಟ್​ ಬೀಸಿದ್ದಾರೆ.

ಸಿಎಂ ಪರ ಸಾರಂಗಧರ ಮಹಾಸ್ವಾಮಿ ಮಾತು

ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್​​ಗೆ ಅರುಣ್ ಸಿಂಗ್ ಆಗಮನ

ಕಲಬುರಗಿಯಲ್ಲಿ ಸಿಎಂ ಪರವಾಗಿ ಬ್ಯಾಟ್ ಬೀಸಿದ ಸುಲಫಲ ಮಠದ ಸಾರಂಗಧರ ಮಹಾಸ್ವಾಮಿ, ಯಡಿಯೂರಪ್ಪ ಅವರನ್ನು ಟಚ್ ಮಾಡಿದರೆ ಕರ್ನಾಟಕಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಗುಡುಗಿದ್ದಾರೆ. ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ನಾಯಕರಲ್ಲ, ಅವರು ಸರ್ವ ಜನಾಂಗದ ನಾಯಕರು. 40 ವರ್ಷಗಳ ಕಾಲ ಸತತ ಹೋರಾಟ ಮಾಡಿ ಸಿಎಂ ಆಗಿದ್ದಾರೆ.

ಬಿ.ಎಸ್.​​ ಯಡಿಯೂರಪ್ಪನವರು ಸಿಎಂ ಖುರ್ಚಿಗೆ ಅಂಟಿಕೊಂಡು ಕೂತಿಲ್ಲ. ಬದಲಾಗಿ ಸಿಎಂ ಹುದ್ದೆಯೇ ಅವರನ್ನು ಹುಡುಕಿಕೊಂಡು ಬಂದಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಬಿಜೆಪಿ ಸರ್ವನಾಶವಾಗುವುದು ಪಕ್ಕಾ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.