ETV Bharat / city

ದುಡಿವ ಕೈಗಳಿಗೆ ಶ್ರೀರಕ್ಷೆಯಾದ ಮೋದಿ ಸರ್ಕಾರ : ಶಾಸಕ ತೇಲ್ಕೂರ ಬಣ್ಣನೆ

author img

By

Published : Aug 16, 2020, 10:42 AM IST

ದುಡಿವ ಕೈಗಳಿಗೆ ಕೆಲಸ ದೊರೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದ್ದು, ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಧೈರ್ಯ ತುಂಬಿದ್ದಾರೆ.

rajkumar patil telkur
ಶಾಸಕ ತೇಲ್ಕೂರ ಬಣ್ಣನೆ

ಸೇಡಂ: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯ ಮಾಡುವ ಮೂಲಕ ದುಡಿವ ಕೈಗಳಿಗೆ ಮೋದಿ ಸರ್ಕಾರ ಶ್ರೀರಕ್ಷೆಯಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ಪಟ್ಟಣದ ಸುವರ್ಣ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಈಗ ಕೃಷಿ ಕ್ಷೇತ್ರ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ದುಡಿವ ಕೈಗಳಿಗೆ ಕೆಲಸ ದೊರೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದ್ದು, ಯಾವುದೇ ಕಾರಣಕ್ಕೂ ಹೆದರದೆ, ಕೊರೋನಾ ಸೋಂಕಿನಿಂದ ಮಸಣಕ್ಕೆ ಹೋಗ್ತಿವಿ ಎಂಬ ಭಾವನೆಯಿಂದ ಹೊರಬರಬೇಕು ಎಂದು ಕೋರಿದರು.

ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ

ವೋಕಲ್ ಫಾರ್ ಲೋಕಲ್ ಧ್ಯೆಯದೊಂದಿಗೆ ಜೀವ ಉಳಿಸುವುದರ‌ ಜೊತೆಗೆ ಜೀವನ ಕಟ್ಟಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಕಾರ ನಿಡುತ್ತಿವೆ. ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಪ್ರಾಮಾಣಿಕ ಕೆಲಸ ಇಲ್ಲಿನ ಅಧಿಕಾರಿಗಳು ಮಾಡಿದ್ದಾರೆ ಎಂದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಅವಿರತ ಶ್ರಮವಹಿಸಿದ ವೈದ್ಯಕೀಯ, ಪೊಲೀಸ್ ಹಾಗೂ ಅನೇಕ ಸರ್ಕಾರಿ ಸಿಬ್ಬಂದಿಯನ್ನು ಇದೇ ವೇಳೆ ಸನ್ಮಾನಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.