ETV Bharat / city

ದೇಶಕ್ಕೆ ಕರ್ನಾಟಕ ಪೊಲೀಸರು ಮಾದರಿ ಆಗಿದ್ರು, ಈಗ ಪರಿಸ್ಥಿತಿ ಕೆಟ್ಟೋಗಿದೆ: ಆರಗ ಜ್ಞಾನೇಂದ್ರ

author img

By

Published : May 6, 2022, 2:16 PM IST

ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದ ಹಿಂದೆ ಯಾರು ಬೇಕಾದರೂ ಇರಲಿ, ಅವರಿಗೆ ಶಿಕ್ಷೆ ನೀಡುವಂತೆ ಸಿಐಡಿಗೆ ಸೂಚನೆ ನೀಡಲಾಗಿದೆ. ಅಕ್ರಮದಲ್ಲಿ ಭಾಗಿಯಾದವರು ಮತ್ತು ಅವರ ಕುಟುಂಬ ನೆಮ್ಮದಿಯಾಗಿಲ್ಲ. ಮಾನ, ಮರ್ಯಾದೆ ಹೋದ ಮೇಲೆ ಬದುಕಿದ್ದು ಏನು ಪ್ರಯೋಜನ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಕಲಬುರಗಿ: ಹಿಂದಿನಿಂದಲೂ ಅಕ್ರಮಗಳು ನಡೆದುಕೊಂಡು ಬಂದಿವೆ. ಆಗಲೇ ತಡೆದಿದ್ದರೆ ಇವತ್ತು ಇಷ್ಟರ ಮಟ್ಟಿಗೆ ಹೋಗ್ತಿರಲಿಲ್ಲ. ಹಿಂದೆ ಆಗದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕ ಪೊಲೀಸರು ದೇಶಕ್ಕೆ ಮಾದರಿಯಾಗಿದ್ರು‌. ಆದ್ರೆ ಪೊಲೀಸ್ ಇಲಾಖೆಯಲ್ಲಿ ಮೊನ್ನೆ ನಡೆದಿದ್ದೇನು?, ಪ್ರಕರಣದಲ್ಲಿ ಓರ್ವ ಡಿವೈಎಸ್‌ಪಿ ಬಂಧನವಾಗಿದೆ. ಇದು ನಾಚಿಕೆಗೇಡಿನ ಸಂಗತಿ ಅಂತ ಗೃಹಮಂತ್ರಿ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ತರಬೇತಿ ಶಾಲೆಯಲ್ಲಿ ಕರ್ನಾಟಕ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ 4ನೇ ತಂಡದ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಹೊಸದಾಗಿ ಪೊಲೀಸರಾದವರಿಗೆ ಹಲವು ಸಲಹೆ ನೀಡಿದರು. ಇದೇ ವೇಳೆ, ಪಿಎಸ್​ಐ ಪ್ರಕರಣದ ಹಿಂದೆ ಯಾರು ಬೇಕಾದರೂ ಇರಲಿ, ಅವರಿಗೆ ಶಿಕ್ಷೆ ನೀಡುವಂತೆ ಸಿಐಡಿಗೆ ಆದೇಶ ನೀಡಲಾಗಿದೆ. ತನಿಖಾ ತಂಡಕ್ಕೆ ಫ್ರೀ ಹ್ಯಾಂಡ್ ಕೊಟ್ಟಿದೇವೆ. ಯಾರೇ ಭಾಗಿಯಾಗಿದ್ರು ಬಂಧಿಸದೇ ಬೀಡಬೇಡಿ ಎಂದು ಸಿಐಡಿಗೆ ಸೂಚನೆ ನೀಡಲಾಗಿದೆ ಎಂದರು.

ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಪಥಸಂಚಲನ ಸಮಾರಂಭದಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ

ಈ ಹಿಂದೆ ಸಹ ಅನೇಕ ಪರೀಕ್ಷೆಯಲ್ಲಿ ಇದೇ ರೀತಿ ಅಕ್ರಮ ನಡೆದಿದೆ. ಆದರೆ, ಅದನ್ನು ಹಿಂದೆಯೇ ತಡೆದಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ತಡೆಯುತ್ತೇವೆ, ನಮ್ಮ ಸರ್ಕಾರಕ್ಕೆ ಆ ಬದ್ಧತೆ ಇದೆ. ಈಗ ಅಕ್ರಮದಲ್ಲಿ ಭಾಗಿಯಾದವರು ಮತ್ತು ಅವರ ಕುಟುಂಬ ನೆಮ್ಮದಿಯಾಗಿಲ್ಲ. ಮಾನ, ಮರ್ಯಾದೆ ಹೋದ ಮೇಲೆ ಬದುಕಿದ್ದು ಏನು ಪ್ರಯೋಜನ? ಎಂದು ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಕುರಿತು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಪಿಎಸ್‌ಐ ಅಕ್ರಮದ ಬಗ್ಗೆ ಪ್ರಭು ಚವ್ಹಾಣ್ ಪತ್ರ ಬರೆದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ?'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.