ETV Bharat / city

ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ: ಯತ್ನಾಳ್‌

author img

By

Published : May 2, 2022, 9:17 AM IST

ಪ್ರಧಾನಿ ಮೋದಿ ಅವರು ಕುಟುಂಬ ರಾಜಕಾರಣದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ- ಬಸನಗೌಡ ಪಾಟೀಲ್​​ ಯತ್ನಾಳ್, ಬಿಜೆಪಿ ಶಾಸಕ

BJP MLA Basanagouda Patil Yatnal
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್

ಕಲಬುರಗಿ: ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಏಡ್ಸ್ ರೋಗದಂತೆ ಹಬ್ಬಿದೆ. ಪ್ರಧಾನಿ ಮೋದಿ ಅವರು ಇದರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಬಸನಗೌಡ ಪಾಟೀಲ್​​ ಯತ್ನಾಳ್ ಹೇಳಿದರು.

ವಂಶಪಾರಂಪರ್ಯ ರಾಜಕಾರಣ ಕುರಿತಾಗಿ ಬಿ.ಎಲ್.ಸಂತೋಷ್ ಹೇಳಿಕೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸುತ್ತಾ, ಒಂದೇ ಕುಟುಂಬದಲ್ಲಿ ಎಂಎಲ್ಎ, ಎಂಎಲ್​ಸಿ, ಎಂಪಿ ಸೇರಿ ನಾಲ್ಕಾರು ಜನರಿರುವ ಸಂಪ್ರದಾಯ ಹೋಗಬೇಕು. ಲಾಬಿ ಮಾಡುವವರಿಗೆ, ಶಾಸಕರ ಶಕ್ತಿ ಪ್ರದರ್ಶನ ಮಾಡುವರಿಗೆ ಹಾಗೂ ಹಣಬಲ ಪ್ರದರ್ಶನ ಮಾಡುವುದೆಲ್ಲಾ ಬಿಜೆಪಿಯಲ್ಲಿ ನಡೆಯಲ್ಲ. ಉತ್ತರ ಪ್ರದೇಶದಲ್ಲಿ ರಾಜನಾಥ್ ಸಿಂಗ್​ ಅವರ ಮಗನನ್ನು ಮಂತ್ರಿ ಮಾಡಿಲ್ಲ. ಇದರಿಂದ ನಮ್ಮಲ್ಲೂ ಕೆಲವರಿಗೆ ನಡುಕ ಶುರುವಾಗಿದೆ. ಅಂತವರೆಲ್ಲ ಜಾಕೆಟ್ ತೆಗೆದಿಟ್ಟು ಕೈಗಾರಿಕೆ ಮಾಡಿಕೊಂಡು ಇರಲಿ. ರಾಜಕಾರಣವನ್ನು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಬಿಡಲಿ ಎಂದರು.


ರಾಷ್ಟ್ರೀಯವಾದಿ ಬಿಜೆಪಿ ಪಕ್ಷ ಕುಟುಂಬ ರಾಜಕಾರಣದ ಬಗ್ಗೆ ಹೇಳಿದಂತೆ ನಡೆದುಕೊಳ್ಳಲಿ ಎನ್ನುವ ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್​​ ಖರ್ಗೆ ಅವರೇ, ಈ ವಿಚಾರದಲ್ಲಿ ಬಿಜೆಪಿಗೆ ನೀವೇ ಆದರ್ಶವಾಗಿ. ನಿಮ್ಮಿಂದಲೇ ಇದು ಶುರುವಾಗಲಿ. ನೀವಾದರೂ ನಿವೃತ್ತಿಯಾಗಿಲ್ಲ. ನಿಮ್ಮ ತಂದೆಗಾದರೂ ನಿವೃತ್ತಿ ಮಾಡಿಸಿ ಮಾದರಿಯಾಗಿ ಎಂದು ಕಾಲೆಳೆದರು.

ನನ್ನ ಮೇಲೆ ಸ್ವಾಮೀಜಿಗಳ ಆಶೀರ್ವಾದ ಕಡಿಮೆಯಾಗಿದೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಯತ್ನಾಳ್​​, ಸ್ವಾಮೀಜಿಗಳ ಆಶೀರ್ವಾದ ಕೂಡಾ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಅವರ ಬೇಡಿಕೆಗಳು ಕೂಡಾ ಹೆಚ್ಚಾಗಿರುತ್ತವೆ. ಮನಸ್ಸಿಗೆ ಬೇಜಾರಾದಾಗ ಒಂದೊಂದು ಮಾತು ಬರುತ್ತಿರುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಜಮೀರ್​ ಅಹ್ಮದ್​ ಹಿಂದು ವಿರೋಧಿ, ಮೊದಲು ಜೈಲಿಗೆ ಹಾಕಿ: ಯತ್ನಾಳ್​ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.