ETV Bharat / city

ವಾಟ್ಸ್​​ಆ್ಯಪ್​​ ಸ್ಟೇಟಸ್​ನಲ್ಲಿ​ ಯುವತಿಯ ನಗ್ನ ಫೋಟೋ ಹರಿಯಬಿಟ್ಟ ಆಸಾಮಿ

author img

By

Published : Nov 17, 2021, 10:24 AM IST

ವಾಟ್ಸ್​​ಆ್ಯಪ್​​ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ ಹಾಕಿ ವಿಕೃತಿ ಮೆರೆದ ಆಸಾಮಿ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Young woman nude photo, Young woman nude photo to whatsapp status, Young woman nude photo to whatsapp status in Hubli, Hubli crime news, Hubli news, ಯುವತಿಯ ನಗ್ನ ಫೋಟೋ, ವಾಟ್ಸಾಪ್​ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ, ಹುಬ್ಬಳ್ಳಿಯಲ್ಲಿ  ವಾಟ್ಸಾಪ್​ ಸ್ಟೇಟಸ್‌ಗೆ ಯುವತಿಯ ನಗ್ನ ಫೋಟೋ, ಹುಬ್ಬಳ್ಳಿ ಅಪರಾಧ ಸುದ್ದಿ, ಹುಬ್ಬಳ್ಳಿ ಸುದ್ದಿ,
ಪೊಲೀಸ್​ ಠಾಣೆ

ಹುಬ್ಬಳ್ಳಿ: ಯುವತಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿದ ಯುವಕನೊಬ್ಬ ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಆಕೆಯ ಫೋಟೋವೊಂದನ್ನು ಎಡಿಟ್ ಮಾಡಿ ವಾಟ್ಸ್​ಆ್ಯಪ್​​ ಸ್ಟೇಟಸ್‌ಗೆ ಇಡುವ ಮೂಲಕ ವಿಕೃತಿ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ವಿರುದ್ಧ ಸೈಬರ್‌ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಶುಭಂ ಅದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಪ್ರೀತಿಸುವುದಾಗಿ ನಂಬಿಸಿ ವಾಟ್ಸ್​​ಆ್ಯಪ್​ ನಂಬರ್‌ ಪಡೆದಿದ್ದ.

ಯುವತಿ ಜೊತೆ ಚಾಟಿಂಗ್ ಮೂಲಕ ಸಲುಗೆ ಬೆಳೆಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಯುವತಿಯ ಜೊತೆ ನಗ್ನ ವಿಡಿಯೋ ಕಾಲ್ ಮಾಡಿದ್ದಲ್ಲದೇ ಆ ಕಾಲ್​ನ ರೆಕಾರ್ಡ್ ಮಾಡಿಕೊಂಡಿದ್ದ. ನ. 11ರಂದು ಆಕೆಯ ನಗ್ನ ಫೋಟೋವನ್ನು ಎಡಿಟ್ ಮಾಡಿ ಸ್ಟೇಟಸ್‌ಗೆ ಹಾಕಿ ವಿಕೃತಿ ಮೆರೆದಿದ್ದ. ವಾಟ್ಸ್​​ಆ್ಯಪ್​​ ಸ್ಟೇಟಸ್​ನಲ್ಲಿ​ ತನ್ನ ನಗ್ನ ಫೋಟೋಗಳನ್ನು ನೋಡಿ ಈ ಘಟನೆ ಬಗ್ಗೆ ಯುವತಿ ಸೈಬರ್ ಕ್ರೈಂ​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.