ETV Bharat / city

ಧಾರವಾಡ-ಹಾವೇರಿ-ಗದಗ ದ್ವಿಸದಸ್ಯ ಕ್ಷೇತ್ರ.. ಸಲೀಂ ಅಹ್ಮದ್‌ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು.. ಪ್ರದೀಪ್‌ ಶೆಟ್ಟರ್‌ಗೂ ಜಯ..

author img

By

Published : Dec 14, 2021, 1:33 PM IST

ಈ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಜಿಲ್ಲೆಯನ್ನೊಳಗೊಂಡಿದೆ. ಕೃಷಿ ವಿವಿಯಲ್ಲಿ‌ ಮತ ಎಣಿಕೆ ಕಾರ್ಯ ನಡೆದಿದೆ. ಧಾರವಾಡ ಕ್ಷೇತ್ರದಲ್ಲಿ ಎರಡು‌ ಸ್ಥಾನಗಳಿಗೆ ಸಲೀಂ ಅಹ್ಮದ್ ಮತ್ತು ಪ್ರದೀಪ್​ ಶೆಟ್ಟರ್​​ ಆಯ್ಕೆಯಾಗಿದ್ದಾರೆ..

Saleem Ahmed won in MLC Election
ಕಾಂಗ್ರೆಸ್​ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು

ಧಾರವಾಡ : ಧಾರವಾಡ-ಹಾವೇರಿ-ಗದಗ್‌ ದ್ವಿಸದಸ್ಯ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಮತ್ತು ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಗೆಲುವಿನ ನಗೆ ಬೀರಿದ್ದಾರೆ.

2,500 ಮತಗಳನ್ನ ಪಡೆದು ಮೊದಲ ಪ್ರಾಶಸ್ತ್ಯ ಮತದಲ್ಲಿ ಸಲೀಂ ಅಹ್ಮದ್ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಪ್ರದೀಪ್​​ ಶೆಟ್ಟರ್ 2472 ಮತ ಗಳಿಸಿ ದ್ವಿತೀಯ ಪ್ರಾಶಸ್ತ್ಯದ ಮತದಲ್ಲಿ ಗೆದ್ದಿದ್ದಾರೆ.

ಈ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಜಿಲ್ಲೆಯನ್ನೊಳಗೊಂಡಿದೆ. ಕೃಷಿ ವಿವಿಯಲ್ಲಿ‌ ಮತ ಎಣಿಕೆ ಕಾರ್ಯ ನಡೆದಿದೆ. ಧಾರವಾಡ ಕ್ಷೇತ್ರದಲ್ಲಿ ಎರಡು‌ ಸ್ಥಾನಗಳಿಗೆ ಸಲೀಂ ಅಹ್ಮದ್ ಮತ್ತು ಪ್ರದೀಪ್​ ಶೆಟ್ಟರ್​​ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಪರಿಷತ್​ ಫಲಿತಾಂಶ : ಬಿಜೆಪಿಯ ಗಣಪತಿ ಉಳ್ವೇಕರ್​ಗೆ ಗೆಲುವು

ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರದೀಪ್​​ ಶೆಟ್ಟರ್, ಸಲೀಂ ಅಹ್ಮದ್​​, ಮಲ್ಲಿಕಾರ್ಜುನ ಹಾವೇರಿ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಒಟ್ಟು ಚಲಾವಣೆಯಾದ ಮತ 7452. ಎರಡು ಕೊಠಡಿಗಳಲ್ಲಿನ 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 77 ಸಿಬ್ಬಂದಿ ಎಣಿಕೆಗೆ ನಿಯೋಜನೆ ಮಾಡಲಾಗಿತ್ತು.‌ ಬಂದೋಬಸ್ತ್​ಗೆ 230 ಪೊಲೀಸರನ್ನು ನಿಯೋಜಿಸಲಾಗಿದೆ.

  • ಕಾಂಗ್ರೆಸ್-3,206
  • ಬಿಜೆಪಿ-2,472.
  • ಪಕ್ಷೇತರ-1,153.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.