ETV Bharat / city

ದೇಶದ ಜನತೆ ಮೋದಿ ಮೇಲೆ ಇಟ್ಟಿರುವ ವಿಶ್ವಾಸ ಕಂಡು ಬೆರಗಾಗಿದ್ದೇನೆ : ಸಚಿವ ಪ್ರಲ್ಹಾದ್ ಜೋಶಿ

author img

By

Published : Mar 13, 2022, 1:17 PM IST

Updated : Mar 13, 2022, 4:33 PM IST

ಡಿಕೆಶಿ ಗೋವಾ‌ ಚುನಾವಣಾ ಪ್ರಚಾರಕ್ಕೆ ಹೋಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾಕೆ ಹೋಗಿದ್ರು ಅನ್ನೋದು ಇನ್ನೂ ಅರ್ಥವಾಗಿಲ್ಲ. ತೋಳು ಬಲ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಹೋಗಿದ್ರಾ?. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಇದೆ ಎಂದರು..

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ಧೂರಿ ಗೆಲುವು ಸಾಧಿಸಿದೆ. ದೇಶದ ಜನರು ಪ್ರಧಾನಿ ಮೋದಿ ಮೇಲೆ ಇಟ್ಟ ವಿಶ್ವಾಸ ಕಂಡು ನಾನು ಬೆರಗಾಗಿದ್ದೇನೆ. ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ಉತ್ತರಾಖಂಡ ಗೆಲುವಿಗೆ ನಾನೊಬ್ಬನೇ ಕಾರಣ ಅಂತಾ ಹೇಳುವುದಿಲ್ಲ. ನಾಲ್ಕು ದಿನ ಪ್ರಧಾನಮಂತ್ರಿಗಳು ಉತ್ತರಾಖಂಡಕ್ಕೆ ಭೇಟಿ ನೀಡಿದ್ದೇ ಬಿಜೆಪಿ ಗೆಲುವಿಗೆ ಕಾರಣವಾಯಿತು. ಅಲ್ಲಿ 80 ಸಾವಿರ ಸಭೆಗಳನ್ನು ಮಾಡಿದ್ದು ಮೈಲುಗಲ್ಲು. ಉತ್ತರಾಖಂಡ ರಾಜ್ಯ ಅಭಿವೃದ್ಧಿ ಕಂಡಿದ್ದು ಈ ಐದು ವರ್ಷದಲ್ಲಿ ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‌ಮಾತನಾಡಿದ ಪ್ರಹ್ಲಾದ್ ಜೋಶಿ

ಸದ್ಯಕ್ಕೆ ನಾಲ್ಕು ರಾಜ್ಯದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ. ಏಪ್ರಿಲ್ 8ರವರೆಗೆ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿಯವರೆಗೆ ಯಾವುದೇ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಚರ್ಚೆ ಇಲ್ಲ.

ಪ್ರಧಾನಿ ಮೋದಿಯವರು ಉಕ್ರೇನ್ ಹಾಗೂ ರಷ್ಯಾ ಜೊತೆ ಮತುಕತೆ ನಡೆಸಿ 22 ಸಾವಿರ ಜನರನ್ನ ಸ್ಥಳಾಂತರ ಮಾಡಿದ್ರು. ಇದು ಮೋದಿ ವ್ಯಕ್ತಿತ್ವದ ಗಟ್ಟಿತನವನ್ನ ತೋರಿಸುತ್ತದೆ ಎಂದರು.

ಡಿಕೆಶಿ ಗೋವಾ‌ ಚುನಾವಣಾ ಪ್ರಚಾರಕ್ಕೆ ಹೋಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾಕೆ ಹೋಗಿದ್ರು ಅನ್ನೋದು ಇನ್ನೂ ಅರ್ಥವಾಗಿಲ್ಲ. ತೋಳು ಬಲ ತೋರಿಸಲು, ಗೂಂಡಾಗಿರಿ ಮಾಡಲು ಡಿಕೆಶಿ ಹೋಗಿದ್ರಾ?. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎಂಬಂತೆ ಕಾಂಗ್ರೆಸ್ ನಡೆ ಇದೆ ಎಂದರು.

ಪ್ರಹ್ಲಾದ್ ಜೋಶಿಗೆ ಅದ್ಧೂರಿ ಸ್ವಾಗತ

ಅದ್ಧೂರಿ ಸ್ವಾಗತ: ಉತ್ತರಾಖಂಡ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಮಾಡಿಕೊಂಡರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಕ್ಷಯ್ ಪಾರ್ಕ್​ವರೆಗೆ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

ಇದನ್ನೂ ಓದಿ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಇಲ್ಲ: ಸಿಎಂ ಬೊಮ್ಮಾಯಿ

Last Updated : Mar 13, 2022, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.