ETV Bharat / city

ಬೆಳಗಾವಿಯಲ್ಲಿಯೇ ಚಳಿಗಾಲದ ಅಧಿವೇಶನ ; ದಿನಾಂಕ‌ ಇನ್ನೂ ನಿಗದಿಯಾಗಿಲ್ಲ.. ಸಿಎಂ ಬೊಮ್ಮಾಯಿ

author img

By

Published : Nov 3, 2021, 1:12 PM IST

Updated : Nov 3, 2021, 2:09 PM IST

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಸಾಮೂಹಿಕವಾಗಿ ಹೊರುತ್ತೇವೆ. ನಮ್ಮ ಕೇಂದ್ರದ ನಾಯಕ ಅಮಿತ್ ಶಾ ನನ್ನ ಹೆಸರು ಹೇಳಿದಾಗಲೇ ಹೇಳಿದ್ದೆ. ನಾನು ಒಬ್ಬ ತಂಡದ ಮುಖ್ಯಸ್ಥ ಇರಬಹುದು. ಆದ್ರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ..

Next assembly Session in Belagavi - CM Bommai
ಬೆಳಗಾವಿಯಲ್ಲಿಯೇ ಅಧಿವೇಶ ಖಚಿತ; ದಿನಾಂಕ‌ ನಿಗದಿಯಾಗಿಲ್ಲ - ಸಿಎಂ ಬೊಮ್ಮಾಯಿ

ಹುಬ್ಬಳ್ಳಿ : ಬರುವ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ನಿಶ್ಚಯಿಸಲಾಗಿದೆ‌. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾತಮಾಡಿದ ಅವರು, ಬೆಳಗಾವಿ ಅಧಿವೇಶನ ಕುರಿತಂತೆ ನವೆಂಬರ 8ರಂದು ಸಚಿವ ಸಂಪುಟದ ಸಭೆ ಇದೆ. ಆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

ಬೆಳಗಾವಿಯಲ್ಲಿಯೇ ಚಳಿಗಾಲದ ಅಧಿವೇಶನ ; ದಿನಾಂಕ‌ ಇನ್ನೂ ನಿಗದಿಯಾಗಿಲ್ಲ.. ಸಿಎಂ ಬೊಮ್ಮಾಯಿ

ರೈತರಿಗೆ ಸಿಎಂ ಸಿಹಿ ಸುದ್ದಿ: ಭತ್ತ ಬೆಳೆಯುವ ರಾಯಚೂರು, ಕೊಪ್ಪಳ ಭಾಗ ಸೇರಿದಂತೆ ರಾಜ್ಯದ ರೈತರು ಭತ್ತ ಖರೀದಿ ಕೇಂದ್ರ ಆರಂಭಿಸಿ ಎಂಬ ಬೇಡಿಕೆ ಇತ್ತು. ಎಂಎಸ್‌ಪಿ ದರದಲ್ಲಿ ಭತ್ತ ಖರೀದಿಸಲು ಸರ್ಕಾರದ ತೀರ್ಮಾನಿಸಿದೆ. ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ದೀಪಾವಳಿ ಮುಗಿದ ತಕ್ಷಣ ಭತ್ತ ಖರೀದಿ ಆರಂಭಸಲಾಗುವುದು. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗುತ್ತದೆ. ಸರ್ಕಾರವೇ ನೇರವಾಗಿ ಭತ್ತ ಖರೀದಿ ಮಾಡಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ : ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡಿದ್ದೇವೆ. ಸೋಲಿನ ಹೊಣೆಯನ್ನು ಎಲ್ಲರೂ ಸಾಮೂಹಿಕವಾಗಿ ಹೊರುತ್ತೇವೆ.

ನಮ್ಮ ಕೇಂದ್ರದ ನಾಯಕ ಅಮಿತ್ ಶಾ ನನ್ನ ಹೆಸರು ಹೇಳಿದಾಗಲೇ ಹೇಳಿದ್ದೆ. ನಾನು ಒಬ್ಬ ತಂಡದ ಮುಖ್ಯಸ್ಥ ಇರಬಹುದು. ಆದ್ರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಮಾಡುತ್ತೇವೆ ಎಂದಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ ಎಂದಿದ್ದಾರೆ.

ಉದಾಸಿ ಇದ್ದಾಗಲೂ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್ ಗೆದ್ದು ಬರುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು ಕೋವಿಡ್‌ ಸಂದರ್ಭದಲ್ಲಿ ಮಾಡಿದ ಜನಪರ‌ ಕೆಲಸಗಳನ್ನು ಜನರು ಬೆಂಬಲಿಸಿದ್ದಾರೆ. ಸೋಲಿನ ಪರಾಮರ್ಶೆ ಮಾಡಲಾಗುವುದು ಎಂದರು

ಕಾಂಗ್ರೆಸ್ ದುರಾಡಳಿತ ಆರೋಪಕ್ಕೆ ಕಿಡಿ : ಹಾನಗಲ್ ಸೋಲು ಬಿಜೆಪಿ‌ ದುರಾಡಳಿದಿಂದ ಸೋಲು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ದುರಾಡಳಿದ ಪ್ರಶ್ನೆಯೇ ಇಲ್ಲ. ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡಿದ್ರು? ಸಿಂದಗಿಯಲ್ಲಿ‌ ಜನರು ನಮ್ಮ ಆಡಳಿತಕ್ಕೆ ನೀಡಿದ ದೊಡ್ಡ ಮೆಚ್ಚುಗೆ. ಸಿಂದಗಿ ಫಲಿತಾಂಶ ನೋಡಿದ್ರೆ ಕಾಂಗ್ರೆಸ್ ಪಕ್ಷವನ್ನು ಜನರು ಸಂಪೂರ್ಣ ತಿರಸ್ಕರಿಸಿದ್ದಾರೆ. ಒಂದು ಉಪ ಚುನಾವಣೆ, ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೂ ಉಪ ಚುನಾವಣೆ ನಡೆದಿದೆ‌ ಎಂದರು.

ಬಿಟ್ ಕಾಯಿನ್ ಪ್ರಕರಣ ಸಿಬಿಐ ತನಿಖೆಗೆ : ಬಿಟ್ ಕಾಯಿನ್ ವಿಚಾರದಲ್ಲಿ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ನಾವೇ ಆರೋಪಿಗಳನ್ನು ಬಂಧಿಸಿ, ಕೇಸ್ ದಾಖಲಿಸಿದ್ದೇವೆ. ವಿಚಾರಣೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ. ವಿಚಾರಣೆ ವೇಳೆ ಇಡಿಗೆ ಶಿಫಾರಸು ಮಾಡಬೇಕು ಅಂದಿದಕ್ಕೆ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆದಿರುವುದರಿಂದ ಸಿಬಿಐ ಇಂಟರ್ ಪೋಲ್‌ಗೆ ವಹಿಸಬೇಕಾಗಿ‌ ಬಂದಿದೆ. ಸಿಬಿಐ ತನಿಖೆಗೆ ವಹಿಸಿದ್ದೇವೆ. ನಾವೇ ತನಿಖೆ ನಡೆಸುತ್ತಿದ್ದೇವೆ ಎಂದರು.

ನೂರು ದಿನ ದೊಡ್ಡ ಮೈಲುಗಲ್ಲು ಅಲ್ಲ: ತಮ್ಮ ಸರ್ಕಾರ ನೂರು ದಿನ ಪೂರೈಸಿದ್ದ ವಿಚಾರಕ್ಕೆ ಮಾತನಾಡಿದ ಸಿಎಂ ಬೊಮ್ಮಾಯಿ, ನೂರು ದಿನ ದೊಡ್ಡ ಮೈಲುಗಲ್ಲು ಅಲ್ಲ. ಒಂದು ವರ್ಷನಾದ್ರು ಆಗಬೇಕು. ಪ್ರಾರಂಭಿಕವಾಗಿ ನಾವು ಹೇಗೆ ನಡೆದುಕೊಂಡಿದ್ದೇವೆ ಅಂತಾ ಹೇಳಬಹುದು. ನೂರು ದಿವಸಗಳಲ್ಲಿ ಯಾವ ರೀತಿ ಹೆಜ್ಜೆ ಇಟ್ಟಿದ್ದೇವೆ‌, ಅಭಿವೃದ್ಧಿ ಪರ ಚಿಂತನೆ ಯಾವ ನಿಟ್ಟಿನಲ್ಲಿ ಇದೆ ಅನ್ನೋದನ್ನ ನಾಳೆ ನಿಮ್ಮುಂದೆ ಇಡುತ್ತೇನೆ ಎಂದರು.

ಪ್ರತಿವರ್ಷ ನಾನು ದೀಪಾವಳಿ ಹುಬ್ಬಳ್ಳಿಯಲ್ಲಿಯೇ ಮಾಡೋದು. ಇವತ್ತು ಹಿರಿಯರ‌ ಹಬ್ಬ, ನಾಳೆ ನಮ್ಮ ಫ್ಯಾಕ್ಟರಿ ಪೂಜೆ, ಮಿತ್ರರ ಅಂಗಡಿಗಳ ಪೂಜೆಗೆ ಹೋಗುವುದಿದೆ ಎಂದು ಸಿಎಂ ಹೇಳಿದ್ದಾರೆ.

Last Updated : Nov 3, 2021, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.