ETV Bharat / city

ನವವಿವಾಹಿತೆ ಅಪಹರಣ ಪ್ರಕರಣ: ಕಾರ್ಪೊರೇಟರ್ ಸೇರಿದಂತೆ ಐವರಿಗೆ ಕೋರ್ಟ್ ವಾರಂಟ್ ಜಾರಿ

author img

By

Published : Jun 29, 2022, 11:15 AM IST

ನವವಿವಾಹಿತೆಯ ಅಪಹರಣ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಕಾರ್ಪೊರೇಟರ್ ಚೇತನ ಹಿರೆಕೇರೂರ ಸೇರಿದಂತೆ ಐದು ಜನರ ಮೇಲೆ ಕೋರ್ಟ್​ ವಾರಂಟ್ ಜಾರಿ ಮಾಡಿದೆ.

ಐವರಿಗೆ ಕೋರ್ಟ್ ವಾರೆಂಟ್ ಜಾರಿ
ಐವರಿಗೆ ಕೋರ್ಟ್ ವಾರೆಂಟ್ ಜಾರಿ

ಹುಬ್ಬಳ್ಳಿ: ಯುವತಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಕಾರ್ಪೊರೇಟರ್ ಸೇರಿದಂತೆ ಐದು ಜನರ ಮೇಲೆ ವಾರಂಟ್​ ಜಾರಿಯಾಗಿದೆ.

ಸಹನಾ ಎಂಬ ಯುವತಿಯನ್ನ ಅಪಹರಣ ಮಾಡಿದ್ದ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್.ಐ.ಆರ್ ದಾಖಲಾಗಿದ್ದರೂ ಯಾವುದೇ ಕ್ರಮಗಳನ್ನ ಪೊಲೀಸರು ಜರುಗಿಸದ ಹಿನ್ನೆಲೆಯಲ್ಲಿ ನಿಖಿಲ್ ದಾಂಡೇಲಿ ಹಾಗೂ ಸಹನಾ, ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಜೆಎಂಎಫ್​ಸಿ ನ್ಯಾಯಾಲಯವು ಶಿವು ಹಿರೆಕೇರೂರ, ಚೇತನ ಹಿರೆಕೇರೂರ, ರಮೇಶ ಪಾವಡೆ, ಸುನೀಲ, ರಮೇಶ ಹೋಬಳೆ ಎಂಬುವರ ವಿರುದ್ಧ ವಾರಂಟ್ ಜಾರಿ ಮಾಡಿದೆ.

ನವವಿವಾಹಿತೆಯ ಅಪಹರಣ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ತಪ್ಪು ಮಾಡಿದವರ ವಿರುದ್ಧ ಕೋರ್ಟ್ ಕೊನೆಗೂ ಚಾಟಿ ಬೀಸಿದೆ. ಪೊಲೀಸರ ಮುಖಾಂತರ ಸಿಗಬೇಕಾಗಿದ್ದ ನ್ಯಾಯ, ಯುವ ದಂಪತಿಗೆ ನ್ಯಾಯಾಲಯದಿಂದ ಸಿಕ್ಕಿದೆ.

ಇದನ್ನೂ ಓದಿ: ಮೈಸೂರಿನ ಸೈಬರ್ ಠಾಣೆಗೆ ದೂರು ನೀಡಿದ ನಟಿ ಪವಿತ್ರ ಲೋಕೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.