ETV Bharat / city

ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರ್​ಎಸ್​ಎಸ್​ ಬೈಠಕ್​​ಗೆ ಚಾಲನೆ

author img

By

Published : Oct 28, 2021, 12:14 PM IST

Updated : Oct 28, 2021, 12:46 PM IST

ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್, ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಅವರು ಆರ್​ಎಸ್​ಎಸ್​ ಬೈಠಕ್​​ಗೆ ಚಾಲನೆ ನೀಡಿದರು.

R.S.S Baithak
ಆರ್​ಎಸ್​ಎಸ್​ ಬೈಠಕ್​​ಗೆ ಚಾಲನೆ

ಧಾರವಾಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಧಾರವಾಡ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆರಂಭಗೊಂಡಿದೆ.

ತಾಲೂಕಿನ ಗರಗ ಗ್ರಾಮದ ಹೊರವಲಯದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕ್ಯಾಂಪಸ್‌ನಲ್ಲಿ ಮೂರು ದಿನಗಳ ಕಾಲ ಬೈಠಕ್‌ ನಡೆಯಲಿದೆ. ಸಂಘದ ಅಖಿಲ ಭಾರತೀಯ, ಕ್ಷೇತ್ರೀಯ ಹಾಗೂ ಪ್ರಾಂತ್ಯ ಸ್ತರದ ಕಾರ್ಯಕರ್ತರು ಸೇರಿ ಒಟ್ಟು 350 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ಆರ್​ಎಸ್​ಎಸ್​ ಬೈಠಕ್​​ಗೆ ಚಾಲನೆ

ಇದನ್ನೂ ಓದಿ: ಮಗುವನ್ನೆತ್ತಿಕೊಂಡು ಕೆಳಗೆ ಕುಳಿತು ಮೆಟ್ರೋ ಪ್ರಯಾಣ: ಮಾನವೀಯತೆ ಮರೆತ ಮಂದಿಗೆ ಸುಧಾಮೂರ್ತಿ ಸಂದೇಶ

ಬೈಠಕ್‌ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್ ಭಾಗವತ್, ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಚಾಲನೆ ನೀಡಿದರು‌. ಸರ ಸಂಘಚಾಲಕರ ನೇತೃತ್ವದಲ್ಲಿಯೇ ಮೂರು ದಿನಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಾಂಗ್ಲಾ ದೇಶದಲ್ಲಿನ ಹಿಂದುಗಳ ಮೇಲಿನ ದಾಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ 2025ಕ್ಕೆ ಸಂಘಕ್ಕೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಆಚರಣೆಯ ರೂಪರೇಷೆಗಳ ಬಗೆಗೂ ಚರ್ಚೆ ನಡೆಯಲಿದೆ. ಇದೇ ವೇಳೆ ರಾಜಕೀಯ ನಾಯಕರು ಭೇಟಿ ಆಗುವ ಸಾಧ್ಯತೆಯಿದೆ.

Last Updated : Oct 28, 2021, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.