ETV Bharat / city

ಕಾಂಗ್ರೆಸ್​ bitcoin scam ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದೆ : ಮಹೇಶ್​ ಟೆಂಗಿನಕಾಯಿ

author img

By

Published : Nov 12, 2021, 3:50 PM IST

ಬಿಟ್ ಕಾಯಿನ್ ದಂಧೆ (bitcoin scam issue) ಬಗ್ಗೆ ಸರ್ಕಾರಿಂದ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇದೇ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ಕಾಂಗ್ರೆಸ್​ನವರು ನೀಡಿದರೇ ಮುಂದಿನ ದಿನಗಳಲ್ಲಿ ಪೊಲೀಸ್ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು..

mahesh-tenginakayi-statement-on-bitcoin-scam
ಮಹೇಶ್​ ಟೆಂಗಿನಕಾಯಿ

ಹುಬ್ಬಳ್ಳಿ : ಬಿಟ್ ಕಾಯಿನ್ ದಂಧೆ (bitcoin scam) ಬಗ್ಗೆ ಕಾಂಗ್ರೆಸ್ ಬಹು ದೊಡ್ಡ ಮಟ್ಟದಲ್ಲಿ ಸುಳ್ಳಿನ ಪ್ರಚಾರ ಮಾಡುತ್ತಿದೆ. ಅಲ್ಲದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಆಧಾರ ರಹಿತ ಹೇಳಿಕೆ‌ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಆರೋಪಿಸಿದರು.

bitcoin scam ಕುರಿತು ಮಹೇಶ್​ ಟೆಂಗಿನಕಾಯಿ ಹೇಳಿಕೆ ನೀಡಿರುವುದು..

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿ (hacker Shreeki) ಹ್ಯಾರಿಸ್ ಪುತ್ರ, ರುದ್ರಪ್ಪ ಲಮಾಣಿ ಪುತ್ರನ ಹೆಸರು ಹೇಳಿದ್ದಾನೆ. ಕಾಂಗ್ರೆಸ್​ನವರು ಕುಂಬಳಕಾಯಿ ಕಳ್ಳ ಯಾರು ಅಂದ್ರೆ ಹೆಗಲು ಮುಟ್ಟಿ ಕೊಳ್ಳುತ್ತಿದ್ದಾರೆ.

ಬಿಟ್ ಕಾಯಿನ್ ದಂಧೆ (bitcoin scam issue) ಬಗ್ಗೆ ಸರ್ಕಾರಿಂದ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಇದೇ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ಕಾಂಗ್ರೆಸ್​ನವರು ನೀಡಿದರೇ ಮುಂದಿನ ದಿನಗಳಲ್ಲಿ ಪೊಲೀಸ್ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್​ ಹಗರಣಗಳ ಪಾರ್ಟಿ : ಕಾಂಗ್ರೆಸ್ ದಲಿತರ ಬಗ್ಗೆ ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ನಿಮ್ಮದೇ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗ ಸಿದ್ದರಾಮಯ್ಯ ಏನ್ ಮಾಡಿದ್ರು..? ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಕಾಂಗ್ರೆಸ್ ಅಂದರೆ ಹಗರಣಗಳ ಪಾರ್ಟಿ ಎಂದು ಮಹೇಶ್​ ಕಿಡಿಕಾರಿದರು.

'ಉಪ' ಸೋಲಿನ ಬಗ್ಗೆ ಅವಲೋಕನ: ಹಾನಗಲ್ ಉಪಚುನಾವಣೆ ಸೋಲನ್ನು ಯಾರೋ ಒಬ್ಬರ ಮೇಲೆ ವೈಯಕ್ತಿಕವಾಗಿ ಹಾಕುವುದಲ್ಲ. ಈಗಾಗಲೇ ಸೋಲಿನ ಬಗ್ಗೆ ಅವಲೋಕನ ಆಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.