ETV Bharat / city

ಅಪಘಾತ ತಪ್ಪಿಸಲು ಹೋಗಿ ಡಿವೈಡರ್​ಗೆ ಗುದ್ದಿದ ವಾಹನ.. ಹೊತ್ತಿ ಉರಿದ ಕಾರಿನಿಂದ ನಾಲ್ವರು ಬಚಾವ್​!

author img

By

Published : Jul 2, 2022, 9:39 AM IST

Updated : Jul 2, 2022, 2:09 PM IST

ಅಪಘಾತ ತಪ್ಪಿಸಲು ಹೋಗಿ ಕಾರೊಂದು ಡಿವೈಡರ್​ಗೆ ಗುದ್ದಿದ್ದು, ಸ್ವಲ್ಪ ಸಮಯದ ಬಳಿಕ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.

Car catches fire after hitting divider in Hubli, Hubli car fire news, Hubli crime news, ಹುಬ್ಬಳ್ಳಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಹುಬ್ಬಳ್ಳಿ ಕಾರಿಗೆ ಬೆಂಕಿ ಸುದ್ದಿ, ಹುಬ್ಬಳ್ಳಿ ಅಪರಾಧ ಸುದ್ದಿ,
ಕಾರಿಗೆ ಬಂಕಿ

ಹುಬ್ಬಳ್ಳಿ: ಆಟೋ ಅಡ್ಡ ಬಂದ ಪರಿಣಾಮ ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಗುದ್ದಿದೆ. ಡಿವೈಡರ್​ಗೆ ಗುದ್ದಿ ನೆಲಕ್ಕುರುಳಿದ ಕಾರು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಅಣ್ಣಿಗೇರಿಯಲ್ಲಿ ನಡೆದಿದೆ.

Car catches fire after hitting divider in Hubli, Hubli car fire news, Hubli crime news, ಹುಬ್ಬಳ್ಳಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಹುಬ್ಬಳ್ಳಿ ಕಾರಿಗೆ ಬೆಂಕಿ ಸುದ್ದಿ, ಹುಬ್ಬಳ್ಳಿ ಅಪರಾಧ ಸುದ್ದಿ,
ಕಾರಿಗೆ ಬಂಕಿ

ಅಣ್ಣಿಗೇರಿ‌ಯ ಹೊರವಲಯದ ತಹಸೀಲ್ದಾರ್ ಕಚೇರಿ ಎದುರು‌ ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೊರಟಿದ್ದ ಸ್ವಿಪ್ಟ್ ಕಾರಿಗೆ ಆಟೋ ಅಡ್ಡ ಬಂದಿದೆ.‌ ಈ ವೇಳೆ, ಅಪಘಾತ ತಪ್ಪಿಸಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರ್​​​ಗೆ ಗುದ್ದಿದ್ದಾನೆ. ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.‌

ಕಾರು ಹೊತ್ತಿ ಉರಿಯುತ್ತಿರುವ ದೃಶ್ಯ

ಓದಿ: ಬೆಂಗಳೂರು: ಕೆಜಿಎಫ್ ನಟನ ಕಾರು ಅಪಘಾತ

ಪಲ್ಟಿ ಹೊಡೆಯುತ್ತಿದ್ದಂತೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದಂತೆ ಕಾರಿನಲ್ಲಿದ್ದ ನಾಲ್ವರು ಹೊರ ಬಂದಿದ್ದಾರೆ. ನಾಲ್ವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಗಾಯಾಳುಗಳನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 2, 2022, 2:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.