ETV Bharat / city

ಹುಬ್ಬಳ್ಳಿಯಲ್ಲಿ ಸಲಗ ಸಿನಿಮಾ ನೋಡಿದ ಬಳಿಕ ರಿಯಲ್ ಆಗಿ ಮಾರಾಮಾರಿ.. ಆರೋಪಿಗಳ ಬಂಧನ

author img

By

Published : Oct 16, 2021, 10:15 AM IST

Updated : Oct 16, 2021, 10:52 AM IST

ಗುರುವಾರ ತೆರೆ ಕಂಡ ಸಲಗ ಸಿನಿಮಾ ನೋಡಲು ಬಂದಿದ್ದವರಲ್ಲಿ ಎರಡು ಗುಂಪಿನವರು ಪರಸ್ಪರ ಹೊಡೆದಾಡಿಕೊಂಡಿದ್ದರು. ನಿನ್ನೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಇಬ್ಬರನ್ನು ಬಂಧಿಸಲಾಗಿದೆ.

2 arrested in fighting case of hubballi
ಸಲಗ ಸಿನಿಮಾ ನೋಡಿದ ನಂತರ 2 ಗುಂಪುಗಳ ನಡುವೆ ಹೊಡೆದಾಟ-ಆರೋಪಿಗಳು ಅಂದರ್​

ಹುಬ್ಬಳ್ಳಿ: ಸಲಗ ಸಿನಿಮಾ ನೋಡಲು ಬಂದ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳವಾಗಿ ಯುವಕನೋರ್ವನಿಗೆ ಹಿಗ್ಗಾ‌ಮುಗ್ಗಾ ಥಳಿಸಿದ ಘಟನೆ ಕುರಿತು ಶುಕ್ರವಾರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಲಗ ಸಿನಿಮಾ ನೋಡಿದ ಬಳಿಕ ರಿಯಲ್ ಆಗಿ ಮಾರಾಮಾರಿ

ಗುರುವಾರ ತರೆಕಂಡ ಸಲಗ ಸಿನಿಮಾ ನೋಡಲು ಬಂದಿದ್ದವರಲ್ಲಿ ಎರಡು ಗುಂಪುಗಳು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ಸಮೇತ ಸುದ್ದಿ ಬಿತ್ತರವಾಗಿತ್ತು.

ಘಟನಾ ಸ್ಥಳಕ್ಕೆ ತಕ್ಷಣ ಪೊಲೀಸರು ಬಂದು ಆರೋಪಿಗಳಾದ ಕೃಷ್ಣಾಪೂರ ಓಣಿಯ ಮಹಮ್ಮದ ಅಂಚಟಗೇರಿ, ಹುಸೇನ ಅಂಚಟಗೇರಿ ಎಂಬುವವರನ್ನು ಕರೆದೊಯ್ದಿದ್ದರು. ನಿನ್ನೆ ಪ್ರಕರಣ ದಾಖಲಿಸಿ, ಜಗಳಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಲಗ ಸಿನಿಮಾ ನೋಡಲು ಬಂದರು: ರಸ್ತೆ ಮಧ್ಯದಲ್ಲಿಯೇ ಸಿನಿಮಾ ಶೈಲಿಯಲ್ಲೇ ಹೊಡೆದಾಡಿದರು! VIDEO

Last Updated : Oct 16, 2021, 10:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.