ETV Bharat / city

ಹಿಜಾಬ್, ಕೇಸರಿ ಶಾಲು ವಿವಾದ: ದಾವಣಗೆರೆಯಲ್ಲಿ ಎರಡು ಕೋಮುಗಳ ವಿದ್ಯಾರ್ಥಿಗಳ ಗಲಾಟೆ

author img

By

Published : Feb 13, 2022, 12:27 PM IST

ಹರಿಹರದಲ್ಲಿ ಒಂದು ಕೋಮಿನ ಪಿಯು ವಿದ್ಯಾರ್ಥಿ ಮೇಲೆ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

hijab saffron shawl supporter fight video viral in davanagere
ದಾವಣಗೆರೆಯಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ

ದಾವಣಗೆರೆ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನ ಮಧ್ಯಂತರ ಆದೇಶ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರದ ಆದೇಶವಿದ್ದರೂ ಇನ್ನೂ ರಾಜ್ಯದ ಕೆಲವೆಡೆ ಗಲಾಟೆ ಮುಂದುವರಿದಿದೆ. ಈ ಕುರಿತಂತೆ ಪ್ರಚೋದನಾಕಾರಿ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಿಲ್ಲೆಯ ಹರಿಹರ ನಗರದ ಜೆ.ಸಿ.ರಸ್ತೆಯಲ್ಲಿರುವ ಡಿಗ್ರಿ ಕಾಲೇಜಿ​ನಲ್ಲಿ ಎರಡು ಕೋಮುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು ಈ ಸಂದರ್ಭದಲ್ಲಿ ಒಂದು ಕೋಮಿನ ಪಿಯು ವಿದ್ಯಾರ್ಥಿ ಮೇಲೆ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕೋಮು ಸಾಮರಸ್ಯ ಕದಡಲು ಕೆಲವರು ಯತ್ನಿಸಿದ್ದಾರೆ.

ಇದನ್ನೂ ಓದಿ: ಶಿರವಸ್ತ್ರ-ಸಮವಸ್ತ್ರ ಸಂಘರ್ಷ: ತುಮಕೂರಲ್ಲಿ ಪೊಲೀಸ್ ಪರೇಡ್‌,ಕಿಡಿಗೇಡಿಗಳಿಗೆ ಎಚ್ಚರಿಕೆ

ಒಂದು ಕೋಮಿನ ಯುವಕನ ತಲೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋ ಹಂಚಿಕೊಂಡು ಮತ್ತೊಂದು ಕೋಮಿನ ಯುವಕರು ವಿಕೃತಿ ಮೆರೆದಿದ್ದಾರೆ.

ಇದೇ ತಿಂಗಳ 08ಕ್ಕೆ ಹರಿಹರ ಕಾಲೇಜಿನ ಆವರಣದಲ್ಲಿ ಈ ಗಲಾಟೆ ನಡೆದಿತ್ತು‌. ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಹರಿಹರ ನಗರ ಠಾಣೆಯ ಪೊಲೀಸರು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.