ETV Bharat / city

ದಾವಣಗೆರೆಯಲ್ಲೂ ನಿರಂತರ ಮಳೆ: ಅಡಿಕೆ ಗಿಡ, ಭತ್ತದ ಪೈರು ಕೊಳೆಯುವ ಆತಂಕ

author img

By

Published : May 19, 2022, 11:05 AM IST

ನಿರಂತರ ಮಳೆಗೆ ದಾವಣಗೆರೆಯ ಹೆಬ್ಬಾಳು ಗ್ರಾಮ ನಲುಗಿದೆ. ಸರ್ಕಾರಿ ಪ್ರೌಢಶಾಲೆಯ ಆವರಣ ಜಲಾವೃತವಾಗಿದೆ.

heavy rain in davanagere
ದಾವಣಗೆರೆಯಲ್ಲಿ ಧಾರಾಕಾರ ಮಳೆ

ದಾವಣಗೆರೆ: ಮುಂಗಾರು ಪೂರ್ವ ಮಳೆ ಅಬ್ಬರಕ್ಕೆ ರಾಜ್ಯದ ಜನತೆ, ರೈತರು ಹೈರಾಣಾಗಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮ ತತ್ತರಿಸಿದೆ. ರಾತ್ರಿ ಸುರಿದ ಜೋರು ಮಳೆಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣ ಜಲಾವೃತವಾಗಿರುವುದನ್ನು ಕಾಣಬಹುದು.

ಪ್ರತ್ಯಕ್ಷ ವರದಿ

ಶಾಲೆಯ ಆವರಣದಲ್ಲಿ ಮಳೆ ನೀರು ನಿಂತಿದೆ. ಅಡಿಕೆ ತೋಟಗಳಲ್ಲಿ ನೀರು ಸಂಗ್ರಹವಾಗಿದೆ. ಭತ್ತದ ಪೈರು ಮಳೆಯ ಹೊಡೆತಕ್ಕೆ ನೆಲಕಚ್ಚಿದೆ. ಇದೇ ರೀತಿ ತೋಟಗಳಲ್ಲಿ ಎರಡ್ಮೂರು ದಿನಗಳ ಕಾಲ ನೀರು ನಿಂತರೆ ಅಡಿಕೆ ಗಿಡ ಹಾಗು ಭತ್ತ ಕೊಳೆಯುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಹೊಳೆಯಂತಾದ ರಸ್ತೆ, ತುಂಬಿ ಹರಿವ ಹಳ್ಳಕೊಳ್ಳ, ಗ್ರಾಮೀಣ ಶಾಲೆಗಳಿಗೆ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.