ETV Bharat / city

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ರೇಣುಕಾಚಾರ್ಯ

author img

By

Published : Jul 24, 2021, 4:12 PM IST

ಸಿಎಂ ಹಾಗೂ ರಾಜ್ಯ ನಾಯಕರ ಮಧ್ಯೆ ಏನು ಚರ್ಚೆಯಾಗಿದೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಕೇಂದ್ರದಿಂದ‌ ಯಾವ ಸೂಚನೆ‌ ಬರುತ್ತೋ, ಅದೇ ಫೈನಲ್ ಆಗಿರುತ್ತದೆ. ಯಾವುದೇ ನಾಯಕರು ಬಿ.ಎಸ್​.ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

CM political secretary Renukacharya
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ರೇಣುಕಾಚಾರ್ಯ

ದಾವಣಗೆರೆ: ಸಿಎಂ ಬದಲಾವಣೆ ಆಗ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ರಾಜಕೀಯ ‌ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ರೇಣುಕಾಚಾರ್ಯ

ನ್ಯಾಮತಿ ತಾಲೂಕಿನ ಬೆಳಗುತ್ತಿ ಗ್ರಾಮದ ಬಳಿ ಮಾತನಾಡಿದ ಅವರು, ಸಿಎಂ ಹಾಗೂ ರಾಜ್ಯ ನಾಯಕರ ಮಧ್ಯೆ ಏನು ಚರ್ಚೆಯಾಗಿದೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಕೇಂದ್ರದಿಂದ‌ ಯಾವ ಸೂಚನೆ‌ ಬರುತ್ತೋ, ಅದೇ ಫೈನಲ್ ಆಗಿರುತ್ತದೆ. ಯಾವುದೇ ನಾಯಕರು ಬಿ.ಎಸ್​.ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯಿಸಿಲ್ಲ. ಸಿಎಂ ಸಹ ಕೇಂದ್ರದ ಸೂಚನೆ ಪಾಲಿಸುತ್ತೇನೆ ಎಂದಿದ್ದಾರೆ ಹೊರತು, ‌ರಾಜೀನಾಮೆ ನೀಡುತ್ತೇನೆ ಎಂದಿಲ್ಲ. ವರಿಷ್ಠರು, ಶಾಸಕಾಂಗ ಪಕ್ಷದ ತೀರ್ಮಾನದಂತೆ‌ ಸಿಎಂ ಆಯ್ಕೆಯಾಗುತ್ತೆ ಎಂದರು.

ಇನ್ನು, ಮಿತ್ರ ಮಂಡಳಿ‌ ಸಚಿವರು ವಲಸಿಗರಲ್ಲ, ಅವರು ಬಿಜೆಪಿಯವರೇ. ಮಿತ್ರ ಮಂಡಳಿ‌, ಬಿಎಸ್‌ವೈ, ಕೇಂದ್ರ ವರಿಷ್ಠರ ಮಧ್ಯೆ ಚರ್ಚೆಯಾಗಿದೆ. ಅವರು ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ. ಬಿಎಸ್‌ವೈ ಪಕ್ಷದ‌ ವರಿಷ್ಠರು‌. ಅವರ ಬಗ್ಗೆ ಗಮನ‌ಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಶಾಸಕ, ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ನನಗೂ‌ ಸಚಿವ ಸ್ಥಾನ‌ ನಿಭಾಯಿಸುವ ಸಾಮರ್ಥ್ಯ ಇದೆ. ಆದರೆ, ಪಕ್ಷದ‌ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕಾರಣ ಮುಖ್ಯವಲ್ಲ. ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ಮುಖ್ಯ. ಅದಕ್ಕಾಗಿ ದೆಹಲಿಯಿಂದ ನನ್ನ ಕ್ಷೇತ್ರಕ್ಕೆ ವಾಪಸ್​ ಬಂದಿದ್ದೇನೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಬೆನ್ನಿಗೆ ಸ್ವಪಕ್ಷದವರೇ ಚೂರಿ ಹಾಕಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.