ETV Bharat / city

ದಾವಣಗೆರೆಯಲ್ಲಿ ಕಳಪೆ ರಸಗೊಬ್ಬರ ಮಾರಾಟ ಯತ್ನ?: ಕೃಷಿ ಇಲಾಖೆಗೆ ದೂರು ನೀಡಿದ ರೈತರು

author img

By

Published : Dec 2, 2021, 7:14 AM IST

Updated : Dec 2, 2021, 12:28 PM IST

ಖಾಸಗಿ ಕಂಪನಿಯೊಂದು ಉಪ್ಪು ಮಿಶ್ರಿತ ಕಳಪೆ ಗೊಬ್ಬರವನ್ನು ಮಾರಾಟ ಮಾಡಲು ಯತ್ನಿಸಿದೆ ಎನ್ನಲಾದ ಘಟನೆ ದಾವಣಗೆರೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

duplicate fertilizer
ಕಳಪೆ ಗೊಬ್ಬರ ಮಾರಾಟಕ್ಕೆ ಯತ್ನ

ದಾವಣಗೆರೆ: ಕಳಪೆ ರಸಗೊಬ್ಬರದಿಂದ ಸಾಕಷ್ಟು ರೈತರು ಮೋಸ ಹೋಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡಿರುವ ಅನೇಕ ಉದಾಹರಣೆಗಳಿವೆ. ಜಿಲ್ಲೆಯಲ್ಲೂ ಸಹ ಈ ರೀತಿಯ ಘಟನೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ವಿವರ:

ಮೈಸೂರು ಮೂಲದ ಗೊಬ್ಬರದ ಕಂಪನಿಯೊಂದು ಇಂಡಿಯನ್ ಐಪಿಎಲ್ ಪೊಟ್ಯಾಷಿಯಂ ಎಂಬ ಹೆಸರಿನ ಗೊಬ್ಬರವನ್ನು ದಾವಣಗೆರೆಯ ವಿನೂತ ಅಗ್ರೋ ಏಜೆನ್ಸಿ ಮುಖೇನ ರೈತರಿಗೆ ಮಾರಾಟ ಮಾಡಲು ಯತ್ನಿಸಿದೆ. ಅಡಿಕೆ ಗಿಡಗಳಿಗೆ ಶೀತ ಹೆಚ್ಚಾಗಿದ್ದರಿಂದ ಈ ಗೊಬ್ಬರ ಖರೀದಿಸಲು ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆಯ ರೈತ ಪರಮೇಶ್ವರಪ್ಪ ಮುಂದಾಗಿದ್ದಾರೆ. ಆದರೆ, ಅವರು ಖರೀದಿಗೂ ಮೊದಲು ಪರಿಶೀಲನೆ ನಡೆಸಿದಾಗ ಗೊಬ್ಬರ ಕಳಪೆಯಿಂದ ಕೂಡಿದೆ ಎಂದು ತಿಳಿದು ಬಂದಿದೆ. ಕೂಡಲೇ ಈ ವಿಚಾರವನ್ನು ಮೈಸೂರಿನಿಂದ ಗೊಬ್ಬರದ ಸಮೇತ ಬಂದಿದ್ದ ಲಾರಿಯನ್ನು ತಡೆದು ನಿಲ್ಲಿಸಿ, ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಳಪೆ ಗೊಬ್ಬರ ಮಾರಾಟಕ್ಕೆ ಯತ್ನ

ಕೃಷಿ ಇಲಾಖೆ ಅಧಿಕಾರಿ ಹೇಳುವುದೇನು?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್, 'ನಮಗೆ ಈ ಕುರಿತು ರೈತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿ ಐಪಿಎಲ್ ಪೊಟ್ಯಾಸಿಯಮ್‌ ಗೊಬ್ಬರ ಇರುವುದು ಕಂಡುಬಂದಿದೆ. ಈ ಗೊಬ್ಬರ ಕಳೆಪೆಯಿಂದ ಕೂಡಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ಈ ವೇಳೆ ಗೊಬ್ಬರ ಕಳಪೆಯಿಂದ ಕೂಡಿರುವುದು ಕಂಡುಬಂದರೆ ಖಾಸಗಿ ಕಂಪನಿ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದರು.

ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಲಾರಿ ಹಾಗು ಗೊಬ್ಬರ ಸಮೇತ ಮೈಸೂರು ಮೂಲದ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Last Updated : Dec 2, 2021, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.