ETV Bharat / city

ಡ್ರಗ್ಸ್ ದಂಧೆ: ಬೆಂಗಳೂರಲ್ಲಿ ಖ್ಯಾತ ಯುಟ್ಯೂಬರ್‌ ಅರೆಸ್ಟ್

author img

By

Published : Jul 9, 2022, 8:02 PM IST

ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಉಗಾಂಡ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದ ಬೆನ್ನಲ್ಲೇ ನೈಜೀರಿಯಾ ಮೂಲಕ ಯುಟ್ಯೂಬರ್ ಅರೆಸ್ಟ್ ಆಗಿದ್ದಾನೆ.

ಡ್ರಗ್ಸ್ ದಂಧೆ
ಡ್ರಗ್ಸ್ ದಂಧೆ

ಬೆಂಗಳೂರು: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಓಬೆಜಿ ಜಸ್ಟಿಸ್ ಅಲಿಯಾಸ್ ಎಂಎಂಡಿ ಮೋಲಾ(31) ಮತ್ತು ಸಾಮ್ಯುಯಲ್ (37) ಬಂಧಿತರು. ಆರೋಪಿಗಳಿಂದ 30 ಸಾವಿರ ರೂ ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್, 1,200 ರೂ. ನಗದು ಜಪ್ತಿ ಮಾಡಲಾಗಿದೆ.

ಇಬ್ಬರ ವೀಸಾ ಅವಧಿ ಮುಕ್ತಾಯಗೊಂಡು ಒಂದು ವರ್ಷಗಳಾಗಿದ್ದು, ಈ ಹಿಂದೆ ಪೂರ್ವ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರದಲ್ಲಿಯೇ ಅಕ್ರಮವಾಗಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಖ್ಯಾತ ಯುಟ್ಯೂಬರ್‌ ಅರೆಸ್ಟ್
ಬೆಂಗಳೂರಲ್ಲಿ ಖ್ಯಾತ ಯುಟ್ಯೂಬರ್‌ ಅರೆಸ್ಟ್

ಆರೋಪಿಗಳ ಪೈಕಿ ಓಬೆಜಿ ಜಸ್ಟಿಸ್ ನೈಜೀರಿಯಾದಲ್ಲಿ ಎಂಎಂಡಿ ಮೋಲಾ ಎಂಬ ಹೆಸರಿನಲ್ಲಿ ಪ್ರಖ್ಯಾತ ಯುಟ್ಯೂಬರ್ ಆಗಿದ್ದಾನೆ. ಯುಟ್ಯೂಬ್‌ನಲ್ಲಿ ಎಂಎಂಡಿ ಮೋಲಾ ಹೆಸರಿನಲ್ಲಿ ಹತ್ತಾರು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ. ಸ್ಥಳೀಯ ಸರ್ಕಾರದ ವಿರುದ್ಧ ಕೆಲ ಹೇಳಿಕೆ ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ನೆರೆ ರಾಜ್ಯದಿಂದ ಡ್ರಗ್ಸ್: ನಗರಕ್ಕೆ ಬಂದಾಗಲೂ ಕೆಲ ವಿಚಾರಗಳ ಕುರಿತು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇನ್ನು ಈತನ ಸ್ನೇಹಿತ ಸಾಮ್ಯುಯಲ್ ಜತೆ ಸೇರಿಕೊಂಡು ನೆರೆ ರಾಜ್ಯಗಳಲ್ಲಿರುವ ಸ್ನೇಹಿತರ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆ ನಡೆಸುತ್ತಿದ್ದ ಎಂದು ಹೇಳಿದ್ದಾರೆ.

ವಿದೇಶಿ ನಿಯಮ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಪ್ರಕರಣ: ಕೆ.ಜಿ.ಹಳ್ಳಿ ಠಾಣಾಧಿಕಾರಿ ಸಿ.ಈ.ರೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಎನ್‌ಡಿಪಿಎಸ್ ಮತ್ತು ವಿದೇಶಿ ನಿಯಮ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಬೆಂಗಳೂರಲ್ಲೇ ಇಂದು ಉಗಾಂಡ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು.

(ಇದನ್ನೂ ಓದಿ: ಡ್ರಗ್ಸ್ ಮಾರಿ 5ಎಕರೆ ಜಮೀನು ಖರೀದಿ: ಆರೋಪಿಯ ಎಲ್ಲಾ ಆಸ್ತಿ ಮುಟ್ಟುಗೋಲು, ಸಿಸಿಬಿಯಿಂದ ಮೊದಲ ಅಸ್ತ್ರ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.